Tuesday, March 19, 2024
spot_imgspot_img
spot_imgspot_img

ಮೂಲ್ಕಿ: ಎನ್‌ಐಎಯಿಂದ ಬಂಧಿತನಾಗಿರುವ ಪಿಎಫ್‌ಐನ ಕಾರ್ಯಕರ್ತ ಮೊಯ್ದಿನ್ ಪತ್ನಿ ನಿಧನ; ಪೆರೋಲ್ ಮೇಲೆ ಬಂದು ಅಂತ್ಯಸಂಸ್ಕಾರದಲ್ಲಿ ಭಾಗಿ

- Advertisement -G L Acharya panikkar
- Advertisement -
vtv vitla

ಮೂಲ್ಕಿ : ಪಿಎಫ್ಐ ನಿಷೇಧದ ವೇಳೆ ಎನ್ಐಎ ಯಿಂದ ಬಂಧಿತನಾಗಿರುವ ಪಿಎಫ್‌ಐನ ಕಾರ್ಯಕರ್ತ ಹಳೆಯಂಗಡಿಯ ಮೊಯ್ದಿನ್ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಅವರ ಪತ್ನಿ ಸೌದಾ ಅವರು ಅಸೌಖ್ಯದಿಂದ ನಿಧನ ಹೊಂದಿದ್ದರೆ. ಇದೀಗ ಅವರ ನಾಲ್ಕು ಮಂದಿ ಪುಟ್ಟ ಮಕ್ಕಳು ಅನಾಥರಾಗಿ ಸಂಬಂಧಿಕರ ಮಡಿಲು ಸೇರುವಂತಾಗಿದೆ.

ಹಳೆಯಂಗಡಿ ಸಮೀಪದ ಇಂದಿರಾ ನಗರ ನಿವಾಸಿ ಮೊಯ್ದಿನ್ ನಿಷೇಧಿತ ಪಿಎಫ್‌ಐನ ಮುಖಂಡನಾಗಿದ್ದು, ಆತನನ್ನು ಎನ್ಐಎ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರ ಪತ್ನಿ ಸೌದಾ ಡಿಸೆಂಬರ್ 6 ರಂದು ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಗೆ ಡಿಸೆಂಬರ್ 7 ರಂದು ಮಧ್ಯಾ ಹ್ನ ಮೊಯ್ದಿನ್‌ನನ್ನು ಪೊಲೀಸ್ ರಕ್ಷಣೆಯಲ್ಲಿ ಪೆರೋಲ್ ಮೇಲೆ ಹಳೆಯಂಗಡಿಗೆ ಕರೆ ತಂದು ಪತ್ನಿಯ ಅಂತಿಮ ದರ್ಶನ ಮಾಡಿಸಿ ರಾತ್ರಿ ಸುಮಾರು ಏಳು ಗಂಟೆ ವೇಳೆಗೆ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಮೊಯ್ದಿನ್‌ಗೆ ಒಂದು ವರ್ಷದ ಗಂಡು ಮಗು ಸೇರಿದಂತೆ ನಾಲ್ಕು ಪುಟ್ಟ ಮಕ್ಕಳಿದ್ದಾರೆ.

ತಂದೆ ಪೊಲೀಸ್ ಬೆಂಗಾವಲಿನಲ್ಲಿ ಮನೆಗೆ ಬಂದಾಗ ಮಕ್ಕಳ ಆನಂದಕ್ಕೆ ಪಾರವೇ ಇರಲಿಲ್ಲ. ತಂದೆ ಬಂದರೆಂದು ಅಪ್ಪನನ್ನು ಅಪ್ಪಿಕೊಂಡು ಸಂತಸದಲ್ಲಿ ತೇಲಾಡಿದ್ದರು. ಮೊಯ್ದಿನ್ ತನ್ನ ಮಕ್ಕ ಳ ಜತೆ ಮಾತನಾಡಿ ಆವರನ್ನು ಮುದ್ದಿಸಿ ಸಂತೈಸಿದ್ದನು. ತಂದೆಯ ಮೇಲೇರಿದ ಒಂದು ಮಗುವಂತೂ ಪೊಲೀಸರು ಮೊಯ್ದಿನ್‌ನನ್ನು ವಾಪಸ್ ಕರೆದೊಯ್ಯುವ ಕೊನೆಯ ಕ್ಷಣದವರೆಗೂ ಕೆಳಗೆ ಇಳಿಯಲೇ ಇಲ್ಲ. ತನ್ನ ಅಮ್ಮ ಇನ್ನು ಬರಲ್ಲ, ಅಪ್ಪ ತನ್ನನ್ನು ಬಿಟ್ಟು ಮತ್ತೆ ಜೈಲು ವಾಸದತ್ತ ಹೋಗುತ್ತಾರೆ ಎಂದು ಅರ್ಥಮಾಡಿಕೊಳ್ಳುವ ಪ್ರಾಯ ಈ ಮಗುವಿನದ್ದಲ್ಲ . ಇಂತಹ ಸನ್ನಿವೇಶದಲ್ಲಿ ಕೊನೆಗೆ ಮನಸಿಲ್ಲದ ಮನಸ್ಸಿನಿಂದ ಮಕ್ಕಳನ್ನು ಬೀಳ್ಕೊಟ್ಟು ಮೊಯ್ದಿನ್ ಪೊಲೀಸರ ಜತೆ ಹೆಜ್ಜೆ ಹಾಕಿದ ದೃಶ್ಯ ಮನ ಕಲಕುವಂತಿತ್ತು .

- Advertisement -

Related news

error: Content is protected !!