Thursday, July 3, 2025
spot_imgspot_img
spot_imgspot_img

ಮೃತಪಟ್ಟ 7 ಗಂಟೆಗಳ ಬಳಿಕ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ!

- Advertisement -
- Advertisement -
vtv vitla
vtv vitla
vtv vitla

ಉತ್ತರಪ್ರದೇಶ : ಮೃತಪಟ್ಟ ವ್ಯಕ್ತಿಯ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಎಂಬಲ್ಲಿ ನಡೆದಿದೆ.

ಶ್ರೀಕೇಶ್ ಕುಮಾರ್ ಎಂಬ ವ್ಯಕ್ತಿ ಎಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುತ್ತಿದ್ದ. ಬೈಕಿನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಆಕ್ಸಿಡೆಂಟ್ ಆಗಿ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಆತನನ್ನು ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಆತನ ಶವವನ್ನು ಅಲ್ಲಿನ ಸಿಬ್ಬಂದಿ ಶವಾಗಾರಕ್ಕೆ ಸ್ಥಳಾಂತರಿಸಿಲಾಯಿತು.

ಆತನ ಮನೆಯವರು ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ, ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿ ಸಹಿಯನ್ನೂ ಹಾಕಿದರು. ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಸಂಬಧಿಕರಲ್ಲಿ ಒಬ್ಬಳು ಹುಡುಗಿ ಮೃತದೇಹದಲ್ಲಿ ಚಲನೆಯನ್ನು ಗುರುತಿಸಿದ್ದಳು. ನಂತರ ಆತ ಜೀವಂತ ಇರುವುದು ಪತ್ತೆಯಾಗಿತ್ತು. ನಂತರ ಸೂಕ್ತ ಶುಶ್ರೂಷೆ ಮಾಡಿದ ನಂತರ ಆತ ಎದ್ದು ಕೂತ ಎಂದು ತಿಳಿದು ಬಂದಿದೆ.

ಆಸ್ಪತ್ರೆಯಲ್ಲಿ ಹಾಜರಿದ್ದ ಮೆಡಿಕಲ್ ಆಫೀಸರ್ ದೇಹವ ತಪಾಸಣೆ ನಡೆಸಿದಾಗ ಹೃದಯ ಬಡಿತ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂಥ ಘಟನೆಗಳು ನಡೆಯುವುದು ಅಪರೂಪ. ಈ ಘಟನೆ ನಿರ್ಲಕ್ಷ್ಯದಿಂದ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!