Friday, September 4, 2026
spot_imgspot_img
spot_imgspot_img

ವಿಟ್ಲ: ಕೇರಳದಿಂದ ಪರವಾನಿಗೆ ಹೊಂದಿ ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗುಂಪು ಕಟ್ಟಿಕೊಂಡು ತಡೆದ ಆರೋಪ: 8 ಮಂದಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಕೇರಳದಿಂದ ಪರವಾನಿಗೆ ಹೊಂದಿ ಲ್ಯಾಟ್ರರೇಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ಗುಂಪೊಂದು ತಡೆದು ನಿಲ್ಲಿಸಿ ಅಡ್ಡಿಪಡಿಸಿದ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಲಾರಿ ಚಾಲಕರು ನೀಡಿದ ದೂರಿನಂತೆ 8 ಮಂದಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ನೆಹರೂನಗರ ನಿವಾಸಿ ಸುಹೇಬ್ (38) ಹಾಗೂ ಉಮೇಶ ಯಾನೆ ಹರ್ಷ ಎಂಬವರು ಸೋಮವಾರ ಕೇರಳದ ನೆಕ್ರಾಜೆ ಎಂಬಲ್ಲಿರುವ ಕೋರೆಯಿಂದ ನೋಂದಣಿ ಸಂಖ್ಯೆ ಕೆಎ-32-ಬಿ 2256 ಹಾಗೂ ಕೆ ಎ 21-ಬಿ 2471ನೇ ಲಾರಿಗಳಲ್ಲಿ ಲ್ಯಾಟರೇಟ್ ಕಲ್ಲುಗಳನ್ನು ಲೋಡ್ ಮಾಡಿದೆ ಲ್ಯಾಟರೇಟ್ ಕಲ್ಲು ಸಾಗಾಟಕ್ಕೆ ಬೇಕಾದ ಪರ್ಮಿಟ್‌ಗಾಗಿ ಪುತ್ತೂರು ಕಡೆಗೆ ಹೋಗುತ್ತಿರುವಾಗ ರಾತ್ರಿ 9.30 ರ ವೇಳೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿಗೆ ತಲುಪಿದಾಗ ಕೆಲವು ಮಂದಿ ವ್ಯಕ್ತಿಗಳು ರಸ್ತೆಯಲ್ಲಿ ಅಕ್ರಮ ಕೂಟ ಸಂಯೋಜನೆ ರಸ್ತೆಗೆ ನಿಂತು ಲಾರಿಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಲ್ಯಾಟರೇಟ್ ಕಲ್ಲು ಸಾಗಾಟದ ಬಗ್ಗೆ ಪರ್ಮಿಟ್ ಕೇಳಿದ್ದಾರೆ.ಲಾರಿ ಚಾಲಕರು ಕಲ್ಲು ಸಾಗಾಟದ ಬಗ್ಗೆಯಿರುವ ಪರ್ಮಿಟ್ ತೋರಿಸಿದ್ದಾರೆ. ಆದರೂ ಸ್ಥಳದಲ್ಲಿದ್ದ ತಂಡ ಕೇರಳ ರಾಜ್ಯದಿಂದ ಕಲ್ಲು ಸಾಗಾಟ ಮಾಡುತ್ತಿರಾ, ನಿಮ್ಮನ್ನು ಈ ರಸ್ತೆಯಲ್ಲಿ ಕಲ್ಲು ಸಾಗಾಟ ಮಾಡಲು ಬಿಡುವುದಿಲ್ಲ ಹೇಳಿದ್ದಾರೆ.

ಲಾರಿ ಚಾಲಕರು ತಮ್ಮ ಲಾರಿಗಳನ್ನು ಉಕ್ಕುಡದಲ್ಲಿರುವ ಸ್ಥಳದಿಂದ ಬ್ರಿಡ್ಜ್ ವರೆಗೆ ಚಲಾಯಿಸಿಕೊಂಡು ಬಂದು ಹೆದರಿಕೆಯಿಂದ ಮುಂದಕ್ಕೆ ಓಡಿದರು ಅಲ್ಲೇ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಬಳಿಕ ಅಲ್ಲಿ ಅಕ್ರಮ ಕೂಟ ಸೇರಿದ್ದ ವ್ಯಕ್ತಿಗಳು ಅವರೊಳಗೆ ಅವರ ಹೆಸರುಗಳನ್ನು ಜಯಪ್ರಕಾಶ್‌, ರಮೇಶ, ಸುಧೀರ್ ಕೋಟ್ಯಾನ್, ವರುಣ್ ರೈ, ಪ್ರಶಾಂತ್, ನಾಗೇಶ್, ಸುಂದರ ಎಂಬುದಾಗಿ ಹೇಳುತ್ತಿರುವುದನ್ನು ಕೇಳಿಕೊಂಡು ಲಾರಿ ಚಾಲಕರು ಆರೋಪಿಗಳ ಹೆಸರು ಪೊಲೀಸರಿಗೆ ತಿಳಿಸಿದರು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!