Friday, May 3, 2024
spot_imgspot_img
spot_imgspot_img

ಮೆಂತ್ಯೆ ಕಾಳಿನ ಸೇವನೆಯಿಂದಾಗುವ ಅರೋಗ್ಯಕಾರಿ ಪ್ರಯೋಜನಗಳು

- Advertisement -G L Acharya panikkar
- Advertisement -
suvarna gold

ಮೆಂತ್ಯೆ ಬಹುಪಯೋಗಿ ಗಿಡಮೂಲಿಕೆಯಾಗಿದ್ದು, ಹಸಿರು ಎಲೆಗಳು ಮತ್ತು ಸಣ್ಣ ಬಿಳಿ ಹೂಗಳನ್ನು ಹೊಂದಿದೆ. ಈ ಹೂವುಗಳು ಬೀಜಗಳನ್ನು ಹೊಂದಿದ್ದು, ಇದು ಕಹಿ ರುಚಿಯನ್ನು ಹೊಂದಿರುವ ಸಣ್ಣ, ಹಳದಿ-ಕಂದು, ಗಟ್ಟಿಯಾದ, ಬೀಜಗಳನ್ನು ಹೊಂದಿರುತ್ತದೆ. ಮೆಂತ್ಯೆ ಕಾಳುಗಳನ್ನು (ಮೆಂತ್ಯೆ ಬೀಜಗಳು) ಸಾಮಾನ್ಯವಾಗಿ ಭಾರತೀಯ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಆದರೆ ಇದರ ಬಳಕೆಗಳು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಅದರಾಚೆಗೂ ಇದೆ.

ಮೆಂತೆ ಕಾಳನ್ನು ರಾತ್ರಿ ಹೊತ್ತು ನೆನೆಸಿ ಬೆಳಗ್ಗೆ ಎದ್ದು ತಿಂದರೆ ಹಲವಾರು ಪ್ರಯೋಜನಗಳಿವೆ. ತಾಯಿಯ ಎದೆ ಹಾಲು ಹೆಚ್ಚಿಸುವುದರೊಂದಿಗೆ, ಟೆಸ್ಟೋಸ್ಟೆರೋನ್ ಬೂಸ್ಟ್ ಮಾಡುವವರೆಗೆ ಮೆಂತೆ ಕಾಳಿನಿಂದ ಹಲವಾರು ಪ್ರಯೋಜನಗಳಿವೆ…

vtv vitla
vtv vitla

ಮೆಂತೆ ಕಾಳಿನಲ್ಲಿರುವ ಪೌಷ್ಟಿಕಾಂಶಗಳು : ಕ್ಯಾಲರಿ : 320, ಕಾರ್ಬೋಹೈಡ್ರೇಟ್ : 58g, ಫೈಬರ್ – 25g , ಪ್ರೊಟೀನ್ – 23g,… ಇತ್ಯಾದಿ.

ತಾಯಿಯ ಎದೆಹಾಲು : ಇದನ್ನು ಪ್ರತಿದಿನ ಸೇವನೆ ಮಾಡುವುದರಿಂದ ಎದೆ ಹಾಲು ಉತ್ಪತ್ತಿಯಾಗುತ್ತದೆ. ಇದು ತಾಯಿಯ ಆರೋಗ್ಯಕ್ಕೂ ಉತ್ತಮ ಆಹಾರವಾಗಿದೆ.

ಜೀರ್ಣಕ್ರಿಯೆ : ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತ್ಯ ಕಾಳಿನಷ್ಟು ಉತ್ತಮ ಮತ್ತೊಂದಿಲ್ಲ. ದೇಹದಲ್ಲಿರುವ ಯಾವುದೇ ವಿಷಕಾರಕ ಅಂಶಗಳನ್ನು ಹೊರ ಹಾಕಿ ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ.

ಡಯಾಬಿಟಿಸ್ ನಿವಾರಣೆ : ಬ್ಲಡ್ ಶುಗರ್ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೂ ಮೆಂತ್ಯ ಕಾಳು ಅತ್ಯುತ್ತಮ. ಇದರಲ್ಲಿ ಗಾಲಕ್ಟೋಮನನ್ ಎಂದು ಕರೆಯಲ್ಪಡುವ ನೈಸರ್ಗಿಕವಾಗಿ ಕರಗುವ ಫೈಬರ್ ಇದೆ. ಇದು ರಕ್ತವು ಸಕ್ಕರೆ ಅಂಶ ಹೀರುವ ವೇಗವನ್ನು ಕಡಿಮೆಗೊಳಿಸುತ್ತದೆ.

ಎದೆ ಉರಿ: ಮೆಂತೆಯಲ್ಲಿ ಕ್ಯಾಲ್ಸಿಯಂ ಅಂಶ ಇದೆ. ಇದು ಎದೆಯುರಿ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

ತೂಕ ಇಳಿಕೆ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತ್ಯ ಕಾಳನ್ನು ಜಗಿದು ತಿಂದರೆ ಹೆಚ್ಚುವರಿ ಕ್ಯಾಲೋರಿ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತದೆ.

ಜ್ವರ, ಗಂಟಲು ಕೆರೆತ ನಿವಾರಕ : ಮೆಂತ್ಯ ಕಾಳನ್ನು ಪುಡಿ ಮಾಡಿ ಒಂದು ಚಹಾ ಚಮಚ ನಿಂಬೆ ರಸ ಮತ್ತು ಜೇನಿನಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಗಂಟಲು ಕೆರೆತ ಮತ್ತು ಕೆಮ್ಮನ್ನೂ ಇದು ಗುಣಪಡಿಸುತ್ತದೆ.

ಕ್ಯಾನ್ಸರ್ ನಿವಾರಕ : ಮೆಂತೆ ಕಾಳು ಸೇವನೆ ಮಾಡುತ್ತಿದ್ದರೆ ಕ್ಯಾನ್ಸರ್ ಉಂಟು ಮಾಡುವ ಅಂಶಗಳನ್ನು ನಿವಾರಣೆ ಮಾಡಲು ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ.

ಮೆದುಳಿನ ಕಾರ್ಯ: ನಿಯಮಿತವಾಗಿ ಮೆಂತೆ ಕಾಳು ಸೇವನೆ ಮಾಡಿದರೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಜೊತೆಗೆ ಕ್ರಿಯಾಶೀಲವಾಗುತ್ತದೆ.

ಪಿರಿಯಡ್ಸ್ ನೋವು: ಮಹಿಳೆಯರನ್ನು ಹೆಚ್ಚಾಗಿ ಕಾಡುವ ಪಿರಿಯಡ್ಸ್ ನೋವು ನಿವಾರಣೆ ಮಾಡಲು ನಿಯಮಿತವಾಗಿ ಮೆಂತೆ ಸೇವಿಸಿ.

ಕಿಡ್ನಿಯ ಆರೋಗ್ಯ: ಕಿಡ್ನಿ ಅರೋಗ್ಯ ಕಾಪಾಡುವಲ್ಲಿ ಮೆಂತೆ ಸಹಾಯ ಮಾಡುತ್ತದೆ. ಇದರಿಂದ ಕಿಡ್ನಿ ಡ್ಯಾಮೇಜ್ ಆಗೋದರಿಂದ ಬಚಾವಾಗಬಹುದು.

- Advertisement -

Related news

error: Content is protected !!