Tuesday, June 23, 2026
spot_imgspot_img
spot_imgspot_img

ಮೈಸೂರು: ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ; ವಿಷ ಅನಿಲ ಸೇವಿಸಿ ಮೂವರು ಅಸ್ವಸ್ಥ

- Advertisement -
- Advertisement -

ಮೈಸೂರು: ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ
ಮೈಸೂರು: ಇಲ್ಲಿನ ಟೀ.ನರಸೀಪುರದಲ್ಲಿ ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ ಉಂಟಾಗಿದೆ. ವಿಷ ಅನಿಲ ಸೇವಿಸಿ ಮೂವರು ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಪಟ್ಟಣದ ವಾಟರ್​​ ಫಿಲ್ಟರ್ ಹೌಸ್ ಮುಂದಿನ ರಸ್ತೆ ಬಂದ್ ಮಾಡಲಾಗಿದೆ. ಅನಿಲ ಸೋರಿಕೆ ನಿಲ್ಲಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಘಟನೆ ನವೆಂಬರ್ 7 ರಂದು ನಡೆದಿತ್ತು. ಹೆರಿಗೆ ವಾರ್ಡ್‌ನ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಹೊತ್ತಿದ್ದ ತಕ್ಷಣ ಇಬ್ಬರು ಬಾಣಂತಿಯರನ್ನು ಜಿಲ್ಲಾಸ್ಪತ್ರೆಯ ಬೇರೊಂದು ವಾರ್ಡ್​ಗೆ ಸ್ಥಳಾಂತರಿಸಲಾಗಿತ್ತು. ಅವರನ್ನು ಜಿಲ್ಲಾ ಆಸ್ಪತ್ರೆಯ ಬೇರೊಂದು ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಈ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಅಸ್ವಸ್ಥರಾಗಿದ್ದರು.

ಘಟನೆಯಲ್ಲಿ ಅಸ್ವಸ್ಥರಾಗಿರುವ ಇಬ್ಬರು ಸೆಕ್ಯುರಿಟಿ ಸಿಬ್ಬಂದಿಯನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿದೆ. ಹೆರಿಗೆ ವಾರ್ಡ್‌ನ ಐಸಿಯುನಲ್ಲಿ ಅವಘಡ ನಡೆದಿದೆ. ಕೂಡಲೇ ಐಸಿಯುನಲ್ಲಿದ್ದ ಬಾಣಂತಿಯರ ಸ್ಥಳಾಂತರ ಮಾಡಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ, ಯಾರಿಗೂ ಭಯ ಬೇಡ. ಐಸಿಯು ಬಿಟ್ಟು ಹೆರಿಗೆ ವಾರ್ಡ್‌ನಲ್ಲಿ ಸಮಸ್ಯೆ ಆಗಿಲ್ಲ. ಎಸಿ ಮಿಷನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಘಟನೆ ನಡೆದಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರನ್ ಹೇಳಿಕೆ ನೀಡಿದ್ದರು.

- Advertisement -

Related news

error: Content is protected !!