Sunday, June 29, 2025
spot_imgspot_img
spot_imgspot_img

ಮೊಬೈಲ್‌ ಮೂಲಕ ಪರಿಚಯ..! ಅಪ್ರಾಪ್ತೆಯನ್ನು ಬೀಚ್‌ಗೆ ಕರೆದುಕೊಂಡು ಹೋಗಿ ನಿರಂತರ ದೈಹಿಕ ಸಂಪರ್ಕ; ಗರ್ಭಿಣಿಯಾಗುತ್ತಿದ್ದಂತೆ ಎಫ್‌ಐಆರ್‌ ದಾಖಲು

- Advertisement -
- Advertisement -

ಮೊಬೈಲ್ ಮೂಲಕವೇ ಪರಿಚಯವಾದ ಅಪ್ರಾಪ್ತೆಯನ್ನು ಬೀಚ್‌ಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿ ಗರ್ಭಿಣಿಯಾಗಲು ಕಾರಣವಾದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶರಣ ರಾಮಪ್ಪ ಪೂಜಾರ(26) ಎಂದು ಗುರುತಿಸಲಾಗಿದೆ.

ಮೊಬೈಲ್ ಮೂಲಕ ಪರಿಚಯ..!
ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ಈತ ಶರಣ ರಾಮಪ್ಪ ಪೂಜಾರ ಅಂಕೋಲಾ ತಾಲೂಕಿನ 16 ವರ್ಷದ ಬಾಲಕಿಯನ್ನು ಮೊಬೈಲ್‌ನಲ್ಲಿ ಮೂರು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಕಳೆದ ಜನವರಿ ತಿಂಗಳಲ್ಲಿ ಅಂಕೋಲಾಕ್ಕೆ ಬಂದು ಬಾಲಕಿಗೆ ಬೊಬ್ರವಾಡದ ನದಿಭಾಗ ಬೀಚಿಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ನಂತರದ ದಿನಗಳಲ್ಲಿ ಸಹ ಇದೇ ರೀತಿಯ ವರ್ತನೆ ಮುಂದುವರೆಸಿ ಬಾಲಕಿ ಗರ್ಭಿಣಿಯಾಗಲು ಕಾರಣವಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಕ್ಸೊ ಪ್ರಕರಣದಡಿ ಆರೋಪಿತನನ್ನು ಬಂಧಿಸಿದ ಪೋಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ.

- Advertisement -

Related news

error: Content is protected !!