Saturday, June 20, 2026
spot_imgspot_img
spot_imgspot_img

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹಾಗೂ ಲೇಡಿ ಡಾನ್ ಅಂದರ್!!

- Advertisement -
- Advertisement -

ದೆಹಲಿ: ಲೇಡಿ ಡಾನ್ ಅನುರಾಧ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕಲ ಜತೇದಿಯನ್ನು ದೆಹಲಿ ವಿಶೇಷ ತನಿಖಾ ದಳ ಪೊಲೀಸರು ಇಂದು ಬಂಧಿಸಿದ ಘಟನೆ ನಡೆದಿದೆ.

ಗ್ಯಾಂಗ್‌ಸ್ಟರ್ ಕಲ ಜತೇದಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ತಾನಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನ ಬಗ್ಗೆ ಮಾಹಿತಿ ಕೊಟ್ಟವರಿಗೆ 7 ಲಕ್ಷ ರೂ. ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಇಂದು ಉತ್ತರಪ್ರದೇಶದ ಷಹರ್‌ನ್ಪುರದಲ್ಲಿ ಬಂಧಿಸಲಾಗಿದೆ ಎಂದು ವಿಶೇಷ ದಳದ ಡಿಸಿಪಿ ಮನೀಷ್ ಚಂದ್ರ ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಪಾತಕಿ ಜತೇದಿ ಗುಂಪಿನ ಸದಸ್ಯೆ, ಲೇಡಿ ಡಾನ್ ಅನುರಾಧಳನ್ನು ಬಂಧಿಸಿದ್ದಾರೆ. ಈಕೆಯ ಮೇಲೆ ಕೊಲೆ, ಸುಲಿಗೆ ಸೇರಿದಂತೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ರಾಜಸ್ತಾನದಲ್ಲಿ ಪ್ರಕರಣ ದಾಖಲಾಗಿದ್ದವು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!