Sunday, June 14, 2026
spot_imgspot_img
spot_imgspot_img

ಮೋಹಿನಿಯ ಹುಡುಕಾಟದಲ್ಲಿ ಧನರಾಜ್ ಆಚಾರ್

- Advertisement -
- Advertisement -

ಧರ್ಮ ದೈವದಂತ ಯಶಸ್ವಿ ಕಿರುಚಿತ್ರ ನೀಡಿದ ತಂಡ ಇದೀಗ ಆಕೆ ಮೋಹಿನಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಬಹುತೇಕ ಕೆಲಸ ಮುಗಿಸಿರುವ ತಂಡ ಶೀಘ್ರದಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಿದೆ. ಚಿತ್ರವನ್ನು ಉದ್ಯಮಿ ಸಂತೋಷ್ ಶೆಟ್ಟಿ ಅಂಗಡಿಗುತ್ತು ಕಳತ್ತೂರು ನಿರ್ಮಿಸಿದ್ದು, ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಜೀವನ ಮೌಲ್ಯ ಯುವ ಜನತೆ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದು ಈ ಕಥೆಯ ಮೂಲವಾಗಿದ್ದು, ಚಿತ್ರದಲ್ಲಿ ಧನರಾಜ್ ಆಚಾರ್, ರಮೇಶ್ ರೈ ಕುಕ್ಕುವಳ್ಳಿ, ರವಿ ಸ್ನೇಹಿತ್, ದೀಕ್ಷಾ ರೈ ಮುಂತಾದವರು ನಟಿಸಿದ್ದು, ಹಮೀದ್ ಪುತ್ತೂರು ಅವರ ಚಿತ್ರಕಥೆ, ಸಂಭಾಷಣೆ ಇದ್ದು ಧನು ರೈ ಕ್ಯಾಮರಾ ಹಾಗು ಪ್ರಚಾರ ಕೆಲಸ ಮಾಡಿದ್ದು ರಾಧೆಶ್ ರೈ ಮೊಡಪ್ಪಾಡಿ ಅವರ ಸಂಕಲನವಿದೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಚಿತ್ರ ಇದಾಗಲಿದೆ.

vtv vitla
vtv vitla
- Advertisement -

Related news

error: Content is protected !!