Monday, June 22, 2026
spot_imgspot_img
spot_imgspot_img

ಯುವತಿ ವಿಚಾರಕ್ಕೆ ಯುವಕರ ನಡುವೆ ಜಗಳ; ಚಾಕುವಿನಿಂದ ಇರಿತ!

- Advertisement -
- Advertisement -

ಬೆಂಗಳೂರು: ಬಸ್​ನಲ್ಲಿ ತೆರಳುತ್ತಿದ್ದಾಗ ಯುವತಿ ವಿಚಾರಕ್ಕೆ ಯುವಕರ ನಡುವೆ ಜಗಳ ನಡೆದು, ಚಾಕು ಇರಿತ ಆಗಿರುವ ದುರ್ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಅ.20 ರಂದು ನಡೆದಿದೆ.

ಹಲ್ಲೆಗೊಳಗಾದ ಯುವಕ ಮಾಗಡಿರಸ್ತೆಯ ಅಗ್ರಹಾರ ನಿವಾಸಿ ಕೀರ್ತನ್ ಕುಮಾರ್ (21) ಎನ್ನಲಾಗಿದೆ.

ಖಾಸಗಿ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿರುವ ಕೀರ್ತನ್ ಕುಮಾರ್ ಬ್ಯಾಡರಹಳ್ಳಿ ಅಂಜನ ನಗರ ನಿವಾಸಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಆರೋಪಿ ಯುವಕ ನಿನ್ನೆ ಸಂಜೆ ಕೀರ್ತನ್ ಕುಮಾರ್ ಸಹಚರರೊಂದಿಗೆ ಅಡ್ಡಗಟ್ಟಿ ಆತನೊಂದಿಗೆ ಜಗಳವಾಡಿದ್ದಾನೆ.

ಸಹಚರರೊಂದಿಗೆ ಜೊತೆಗೆ ಸೇರಿ ಹಲ್ಲೆ ಮಾಡಿದ್ದಲ್ಲದೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೂಡಲೇ ಗಾಯಾಳು ಕೀರ್ತನ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಮಾಕ್ಷಿ ಪಾಳ್ಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!