Saturday, April 27, 2024
spot_imgspot_img
spot_imgspot_img

ರಚಿತಾ ರಾಮ್ ನಟನೆಯ ಸಿನಿಮಾ‌ ಚಿತ್ರೀಕರಣದ ವೇಳೆ ಫೈಟರ್ ಸಾವು!

- Advertisement -G L Acharya panikkar
- Advertisement -

ರಾಮನಗರ: ಸಿನಿಮಾ‌ ಚಿತ್ರೀಕರಣದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಫೈಟರ್ ಸಾವನ್ನಪ್ಪಿದ ಘಟನೆ ತಾಲೂಕಿನ ಬಿಡದಿ ಹೋಬಳಿ ಜೋಗರಪಾಳ್ಯದಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ವಿವೇಕ್ (35) ಎನ್ನಲಾಗಿದೆ.

ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ನಟಿಸುತ್ತಿರುವ ಲವ್ ಯೂ ರಚ್ಚು ಎಂಬ ಚಿತ್ರದ ಶೂಟಿಂಗ್ ಮಾಡುತ್ತಿರುವ ವೇಳೆ ಈ ಅವಘಡ ನಡೆದಿದೆ. ಫೈಟ್​ ಮಾಸ್ಟರ್​ ವಿನೋದ್ ನಿರ್ದೇಶನದಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯದ ಚಿತ್ರೀಕಣದ ವೇಳೆ ಹೈ ಟೆನ್ಷನ್ ವೈರ್ ತಗುಲಿ ಫೈಟರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಚಿತ್ರೀಕರಣ ನಿಲ್ಲಿಸಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರಿಗೆ ಗಾಯವಾಗಿತ್ತು. ಈ ಪೈಕಿ ವಿವೇಕ್ ಮೃತಪಟ್ಟಿದ್ದಾರೆ‌. ಮತ್ತೋರ್ವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

driving
- Advertisement -

Related news

error: Content is protected !!