Thursday, May 16, 2024
spot_imgspot_img
spot_imgspot_img

ರಾಗಿ ಸೇವನೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ; ಇಲ್ಲಿದೆ ಸಂಪೂರ್ಣ ಮಾಹಿತಿ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆ ಜನರಲ್ಲಿ ಹೆಚ್ಚು ಕಾಡುತ್ತಿದೆ. ಅದರಲ್ಲಿಯೂ 50 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ ಅಂದರೆ ತಪ್ಪಾಗಲಾರದು. ಈ ವಯಸ್ಸಿನಲ್ಲಿ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಯ ಮೂಲಕ ನಿಮ್ಮಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು.

ರಾಗಿ ಸೇವನೆಯಿಂದ ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ತರಬಹುದು ಎಂದರೆ ನೀವು ನಂಬುತ್ತೀರಾ? ರಾಗಿಯಲ್ಲಿ, ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇದಲ್ಲದೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ರಾಗಿಯಿಂದ ತಯಾರಿಸಿದ ವಿವಿಧ ತಿಂಡಿಗಳನ್ನು ಸೇವಿಸುವ ಅಭ್ಯಾಸ ರೂಢಿಯಲ್ಲಿಟ್ಟುಕೊಂಡರೆ ಬಹುಬೇಗ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು.

ಜೊತೆಗೆ ಮಧುಮೇಹ ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ದರೆ ರಾಗಿ ಸೇವನೆಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಬಿಪಿ ಸಮಸ್ಯೆ ನಿಯಂತ್ರಣಕ್ಕೆ ತರಬಹುದು. ಮಧುಮೇಹ ಸಮಸ್ಯೆಯು ಕೇಲವ ದೇಹದ ದುರ್ಬಲತೆ ಜೊತೆಗೆ ಮಾನಸಿಕ ಸ್ಥಿತಿಯನ್ನೂ ಬದಲಾಯಿಸುತ್ತದೆ. ಮನಸ್ಸಿಗೆ ಕಿರಿಕಿರಿ, ಒತ್ತಡ ಮತ್ತು ವಿಪರೀತ ಚಿಂತೆಯಂತಹ ಸಮಸ್ಯೆಗಳು ನಿಮ್ಮನ್ನು ಹೆಚ್ಚು ಕಾಡುತ್ತವೆ.

ಹೆಚ್ಚು ಆಯಾಸ, ದೇಹದ ದರ್ಬಲತೆ, ಕೈಕಾಲು ಸೆಳೆತ, ಕೋಪ ಇವು ನಿಮ್ಮ ದೇಹವನ್ನು ಹೆಚ್ಚು ಹೆಚ್ಚು ದುರ್ಬಲಗೊಳಿಸುತ್ತದೆ. ಹಾಗಾಗಿ ಮಧುಮೇಹ ಸಮಸ್ಯೆಯಿಂದ ಆಹಾರ ಪದ್ಧತಿಯದಲ್ಲಿನ ಕೆಲವು ಬದಲಾವಣೆ ಮುಖ್ಯ. ನಿಮ್ಮ ಆಹಾರದಲ್ಲಿ ರಾಗಿ ಸೇರಿಸುವ ಮೂಲಕ ನಿಮ್ಮ ಮಧುಮೇಹ ಸಮಸ್ಯೆಯನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರಬಹುದಾಗಿದೆ.

ಅಕ್ಕಿ, ಗೋಧಿ, ಮೈದಾ ಹಿಟ್ಟು ಇವುಗಳನ್ನು ಬಳಸುವ ಬದಲು ನೀವು ರಾಗಿಯನ್ನು ಬಳಸಬಹುದು. ಅಡುಗೆ ಸಕ್ಕರೆ, ಎಣ್ಣೆಯ ಪದಾರ್ಥಗಳು, ಹೆಚ್ಚು ಸಿಹಿ ಇವುಗಳನ್ನೆಲ್ಲಾ ಪಕ್ಕಕ್ಕಿಟ್ಟು ಹಿತಮಿತವಾದ ಆಹಾರ ಸೇವನೆ ಜೊತೆಗೆ ರಾಗಿಯಿಂದ ವಿವಿಧ ತಿಂಡಿಗಳನ್ನು ತಯಾರಿಸಿ ನೀವು ಸವಿಯಬಹುದು. ಹೆಚ್ಚಿನ ಫೈಬರ್ ಅಂಶವಿರುವ ಕಾರಣ ರಾಗಿಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುತ್ತದೆ. ಇದು ಸಕ್ಕರೆ ಮಟ್ಟ ಹೆಚ್ಚಲು ದಾರಿ ಮಾಡಿಕೊಡುವುದಿಲ್ಲ. ಜೊತೆಗೆ ರಾಗಿಗಳಲ್ಲಿ ವಿವಿಧ ರಾಗಿಗಳನ್ನೂ ಸಹ ನೀವು ಬಳಸಬಹುದಾಗಿದೆ.

ಫಾಕ್ಸ್ಟೈಲ್ ರಾಗಿ: ಇದು ಫೈಬರ್, ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಕೊಬ್ಬು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ರಂಜಕ, ಮೆಗ್ನೀಶಿಯಮ್ ಮತ್ತು ವಿಟಮಿನ್ ಬಿ3 ಯಿಂದ ಸಮೃದ್ಧವಾಗಿರುತ್ತದೆ. ಕಡಿಮೆ ಕ್ಯಾಲೊರಿ, ಕಬ್ಬಿಣದ ಅಂಶ ಹಾಗೂ ಫೈಟಿಕೆಮಿಕಲ್ಸ್, ಫೈಟೇಟ್ಸ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ.

ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಶಿಯಮ್ ಮತ್ತು ಖನಿಜಗಳಿಂದ ಕೂಡಿರುತ್ತದೆ. ರುಚಿಯಾಗಿ ರಾಗಿಯಿಂದ ಹೊಸ ಹೊಸ ಖಾದ್ಯಗಳನ್ನು ಮಾಡಿ ಸವಿಯಬಹುದು ಜೊತೆಗೆ ನಿಮ್ಮ ಆರೋಗ್ಯ ಸಮಸ್ಯೆಯನ್ನೂ ದೂರಮಾಡಿಕೊಳ್ಳಬಹುದಾಗಿದೆ.

ಊಟಕ್ಕೆ 25 ಗ್ರಾಂಗಳಿಗಿಂತ ಹೆಚ್ಚು ರಾಗಿಯ ಸೇವನೆ ಒಳ್ಳೆಯದಲ್ಲ. ನೀವು ರಾಗಿಯ ಜೊತೆಗೆ ತಾಜಾ ತರಕಾರಿ ಹಣ್ಣುಗಳನ್ನು ಸೇವಿಸಿ. ನಿಯಮಿತ ಆಹಾರ ವ್ಯವಸ್ಥೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಮೈದಾ, ಗೋಧಿಯನ್ನೆಲ್ಲಾ ಅಡುಗೆ ಮನೆಯಲ್ಲಿ ಪಕ್ಕಕ್ಕಿಟ್ಟು ರಾಗಿಯಿಂದ ತಯಾರಿಸಿದ ಖಾದ್ಯವನ್ನು ಸವಿಯಿರಿ. ನಾಲ್ಕು ತಿಂಗಳ ಕಾಲ ಆಹಾರದಲ್ಲಿ ನಿಯಂತ್ರಣ ಮತ್ತು ರಾಗಿ ಸೇವೆನೆಯ ಮೂಲಕ ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಬಹುದು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮೊದಲು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ನೀವು ಸೇವಿಸುವ ಆಹಾರದ ಬಗ್ಗೆ ವೈದ್ಯರ ಸಲಹೆ ಪಡೆದು ಬಳಿಕ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

vtv vitla
- Advertisement -

Related news

error: Content is protected !!