Saturday, April 27, 2024
spot_imgspot_img
spot_imgspot_img

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ಮೋಸದ ಬಲೆಗೆ ಬಿದ್ದ ಯುವತಿ; ದೂರು ದಾಖಲು

- Advertisement -G L Acharya panikkar
- Advertisement -

ಮಂಗಳೂರು : ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ನಂತರ ಮದುವೆಯಾಗುವುದಿಲ್ಲ ಎಂದು ಯುವತಿ ಬಾಳಿನಲ್ಲಿ ಯುವಕ ಚೆಲ್ಲಾಟವಾಡಿದ ಘಟನೆ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಮೂಡಬಿದಿರೆ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಅಭಿಷೇಕ್ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯ ಮನೆಯಲ್ಲಿ ಮಾತನಾಡಿ ಮದುವೆಗೆ ಮನೆಯವರನ್ನು ಒಪ್ಪಿಸಿದ್ದು, ನಿಶ್ಚಿತಾರ್ಥದ ದಿನಕೂಡ ನಿಗದಿಮಾಡಿ ಪ್ರೀತಿಯ ನಾಟಕವಾಡಿ ಯುವತಿಯನ್ನು ಫ್ರೆಂಡ್ಸ್ ಪಾರ್ಟಿ ಇದೆ ಎಂದು ನಂಬಿಸಿ ಮೂಡಬಿದಿರೆಯ ಗೋಲ್ಡನ್ ಗೇಟ್ ಲಾಡ್ಜ್’ಗೆ ಕರೆದುಕೊಂಡು ಹೋಗಿ ಯುವತಿಗೆ ಬ್ರಿಝರ್ ಕೂಡಿಯುವಂತೆ ಒತ್ತಾಯಿಸಿ ನಂತರ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಜೀವ ಬೆದರಿಕೆ

ಅತ್ಯಾಚಾರ ನಂತರ ಯುವತಿಯನ್ನು ಮದುವೆಯಾಗುವುದಿಲ್ಲ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 376, 417, 420, 506, 109, 34 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡ ಆರೋಪಿ.!
ಯುವಕನೇ ಮೊದಲು ಇನ್‌ಸ್ಟಾಗ್ರಾಂ ನಲ್ಲಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ. ನಂತರ ಸಂತ್ರಸ್ಥ ಹುಡುಗಿಯ ಮನೆಗೆ ಬಂದು ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ. ಆದ್ರೆ ಕಳೆದ ಒಂದು ತಿಂಗಳಿನಿಂದ ಯುವತಿಯ ಸಂಪರ್ಕಕ್ಕೆ ಸಿಗುತ್ತಿಲ್ಲ. ನಂಬರ್ ಅನ್ನು ಸಹ ಆತ ಬ್ಲಾಕ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಊರಿನಲ್ಲಿಯೇ ತಲೆಮರೆಸಿಕೊಂಡು ತಿರುಗಿದ್ದಾನೆ ಎಂಬ ಆರೋಪವೂ ಇದೆ.

ಊರಿನಲ್ಲೇ ತಿರುಗುತ್ತಿದ್ದರೂ ಆಗಿಲ್ಲ ಬಂಧನ..!
ಮಂಗಳೂರು ಮಹಿಳಾ ಠಾಣೆಯಲ್ಲಿ non – bailable ಕೇಸು ದಾಖಲಾಗಿದ್ದರೂ ಆರೋಪಿಯನ್ನು ಇನ್ನೂ ಸಹ ಬಂಧಿಸಿಲ್ಲ ಎಂದು ಸಂತ್ರಸ್ಥ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಊರಿನಲ್ಲೇ ತಿರುಗಾಡುತ್ತಿದ್ದು ಪೊಲೀಸ್ ಇಲಾಖೆ ಬಂಧಿಸಿಲ್ಲ.

ಆರೋಪಿಯ ತಂದೆ ತಾಯಿಯ ವಿರುದ್ಧವೂ ದೂರು
ಆರೋಪಿ ಅಭಿಷೇಕ್ ತಂದೆ ತಾಯಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ತಂದೆ ಶ್ಯಾಮ್ ಸುಂದರ್‍, ತಾಯಿ ಭಾರತಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯ ಈ ರೀತಿ ಮಾಡಲು ತಂದೆ ತಾಯಿಯ ಕುಮ್ಮಕ್ಕು ಇದೆ ಎನ್ನಲಾಗಿದೆ.

- Advertisement -

Related news

error: Content is protected !!