Saturday, April 20, 2024
spot_imgspot_img
spot_imgspot_img

ರಾಜ್ಯಕ್ಕೆ ಇನ್ನೂ ಒಮಿಕ್ರಾನ್ ಎಂಟ್ರಿ ಕೊಟ್ಟಿಲ್ಲ; ಸಚಿವ ಡಾ ಸುಧಾಕರ್ ಸ್ಪಷ್ಟನೆ

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು: ರಾಜ್ಯಕ್ಕೆ ಇನ್ನೂ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಪ್ರವೇಶಿಸಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಏರ್ ಪೋರ್ಟ್ ನಲ್ಲಿ ಪ್ರತಿಯೊಬ್ಬರ ಪರೀಕ್ಷೆ ಮಾಡಿಸಿ ಅಲ್ಲಿಯೇ ವರದಿ ನೀಡಲಾಗುತ್ತದೆ.

ಪಾಸಿಟಿವ್ ಬಂದವರನ್ನು ಹೊರಗೆ ಬಿಡದೆ ಪ್ರತ್ಯೇಕವಾಗಿಟ್ಟು ಪ್ರಯಾಣಿಕರ ಗಂಟಲು ದ್ರವದ ಜಿನೋಮ್ ಟೆಸ್ಟ್ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು. ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಜೊತೆ ಮಾತನಾಡಿದ್ದೇನೆ. ಜೀನೋಮಿಕ್ ಸೀಕ್ವೆನ್ಸ್ ನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ನೀಡಿದರೆ ವರದಿ ಬರಲು 8ರಿಂದ 10 ದಿನಗಳು ಬೇಕಾಗುತ್ತದೆ. ಹೀಗಾಗಿ ಡಿಸೆಂಬರ್ 1ರ ವೇಳೆಗೆ ಸ್ಪಷ್ಟವಾಗಿ ತಿಳಿದುಬರಲಿದೆ ಎಂದರು.

ದೇಶದಲ್ಲಿರುವ ಎರಡು ದೊಡ್ಡ ಲ್ಯಾಬ್ ಗೆ ಮತ್ತು ನಾವಿಲ್ಲಿ ನಾಲ್ಕು ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್ ತೆರೆಯಲು ಅನುಮತಿ ಕೇಳಿದ್ದೇವೆ ಎಂದರು. ಈಗಾಗಲೇ ಏರ್ ಪೋರ್ಟ್, ಕೇರಳ-ಮಹಾರಾಷ್ಟ್ರ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.

- Advertisement -

Related news

error: Content is protected !!