Monday, August 31, 2026
spot_imgspot_img
spot_imgspot_img

ರಾಜ್ಯದಲ್ಲಿ ಆನ್’ಲೈನ್ ಗೇಮ್’ಗೆ ಹೈಕೋರ್ಟ್’ನಿಂದ ಗ್ರೀನ್ ಸಿಗ್ನಲ್..!

- Advertisement -
- Advertisement -
vtv vitla
vtv vitla

ಬೆಂಗಳೂರು: ರಾಜ್ಯದಲ್ಲಿ ಆನ್ ಲೈನ್ ಗೇಮ್ ನಿಷೇಧ ಹೇರಿದಂತ ಸರ್ಕಾರ ಆದೇಶವನ್ನು, ಇಂದು ಹೈಕೋರ್ಟ್ ರದ್ದು ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದ್ದಂತ ಆನ್ ಲೈನ್ ಗೇಮ್ ನಿಷೇಧದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನೆಡಸಲಾಯಿತು. ಸರ್ಕಾರ ಹೊರಡಿಸಿದ್ದಂತ ಆನ್ ಲೈನ್ ಗೇಮ್ ಆದೇಶವನ್ನು ರದ್ದು ಪಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಆನ್ ಲೈನ್ ಗೇಮ್ ಆಟಕ್ಕೆ ಅನುಮತಿ ದೊರೆತಂತೆ ಆಗಿದೆ.

ಅಂದಹಾಗೇ ರಾಜ್ಯ ಸರ್ಕಾರ ಈ ಹಿಂದೆ ಆನ್ ಲೈನ್ ಗೇಮ್ ಗಳನ್ನು ರದ್ದು ಪಡಿಸಿತ್ತು. ಈ ಮೂಲಕ ರಾಜ್ಯಾಧ್ಯಂತ ಆನ್ ಲೈನ್ ಆಟಕ್ಕೆ ಬ್ರೇಕ್ ಹಾಕಿತ್ತು. ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಹೀಗಾಗಿ ಮತ್ತೆ ಆನ್ ಲೈನ್ ಗೇಮ್ ಶುರುವಾಗುವಂತೆ ಆಗಿದೆ.

- Advertisement -

Related news

error: Content is protected !!