Tuesday, April 30, 2024
spot_imgspot_img
spot_imgspot_img

ರಿವರ್ ರ್‍ಯಾಫ್ಟಿಂಗ್ ವೇಳೆ ದೋಣಿ ಮುಳುಗಡೆ-12 ಮಂದಿ ಪ್ರವಾಸಿಗರ ರಕ್ಷಣೆ

- Advertisement -G L Acharya panikkar
- Advertisement -

ಗಣೇಶಗುಡಿ: ದಾಂಡೇಲಿ ಸಮೀಪದ ಗಣೇಶಗುಡಿಯಲ್ಲಿ ಪ್ರವಾಸಿಗರನ್ನು ರಿವರ್ ರ್‍ಯಾಪ್ಟಿಂಗ್‌ಗೆ ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆ ಹಂತ ತಲುಪಿದ ಪರಿಣಾಮ ನೀರಿನಲ್ಲಿ ಬಿದ್ದಿದ್ದ 12 ಮಂದಿಯನ್ನು ಪ್ರವಾಸಿ ನಿರ್ವಾಹಕರು ರಕ್ಷಿಸಿದ್ದಾರೆ. ಆ ಮೂಲಕ ಸಂಭಾವ್ಯ ಭಾರೀ ಅಪಾಯವೊಂದು ಕೆಲವೇ ನಿಮಿಷಗಳ ಅಂತರದಲ್ಲಿ ತಪ್ಪಿದಂತಾಗಿದೆ.

ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ಕುಳ್ಳಿರಿಸಿ ದೋಣಿಯಲ್ಲಿ ಕರೆದೊಯ್ದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಆ ಮೂಲಕ ನಿಯಮ ಉಲ್ಲಂಘನೆಗಳು ನಡೆಯುತ್ತಿರುವುದು ಸ್ಪಷ್ಟವಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಕ್ಕಳು ಸೇರಿದಂತೆ ಪ್ರವಾಸಿಗರು ರಕ್ಷಣೆಗೆ ಕಿರುಚಾಡುತ್ತಿರುವುದು ಕಂಡು ಬಂದಿದೆ.

ರಬ್ಬರ್‍ ಬೋಟ್‌ನಲ್ಲಿ ಆರಕ್ಕಿಂತ ಹೆಚ್ಚು ಮಂದಿಯನ್ನು ಕುಳ್ಳಿರಿಸಿ ರಿವರ್‍ ರ್‍ಯಾಪ್ಟಿಂಗ್ ಮಾಡುವಂತಿಲ್ಲ. ಆದರೆ, ಮುಳುಗಡೆ ಹಂತದಲ್ಲಿದ್ದ ಬೋಟ್‌ನಲ್ಲಿ 12 ಮಂದಿ ಇದ್ದರು. ಇದರಿಂದ ಭಾರ ತಡೆಯಲಾಗದೆ ದೋಣಿ ಮುಳುಗಡೆ ಹಂತಕ್ಕೆ ತಲುಪಿದೆ. ಪ್ರವಾಸಿಗರೆಲ್ಲರೂ ಲೈಫ್ ಜಾಕೆಟ್ ಹಾಕಿದ್ದರಿಂದ ಮತ್ತು ಪ್ರವಾಸಿ ನಿರ್ವಾಹಕರು ತತ್‌ಕ್ಷಣ ಕಾರ್ಯಾಚರಣೆಗಿಳಿದಿದ್ದರಿಂದ ಸಂಭಾವ್ಯ ಭಾರೀ ಅಪಾಯ ತಪ್ಪಿದಂತಾಗಿದೆ.

ನಿಯಮ ಉಲ್ಲಂಘನೆ ಮಾಡಿ ದೋಣಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಂದಿಯನ್ನು ಕರೆದೊಯ್ದಿರುವುದು ಅಕ್ಷಮ್ಯ. ಸಂಭವನೀಯ ದುರಂತದ ಕುರಿತು ಪರಿಶೀಲಿಸಲು ತಂಡವೊಂದನ್ನು ನಿಯೋಜಿಸುವುದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

Related news

error: Content is protected !!