Friday, April 26, 2024
spot_imgspot_img
spot_imgspot_img

‘ರೊಮ್ಯಾಂಟಿಕ್​ ಹಾಡುಗಳಲ್ಲಿ ದಕ್ಷಿಣಕ್ಕಿಂತ ಬಾಲಿವುಡ್​ ಬೆಸ್ಟ್​’ ಎಂದ ಕಿರಿಕ್ ಬೆಡಗಿ

- Advertisement -G L Acharya panikkar
- Advertisement -

ಹಿಂದಿ ಮಂದಿಯನ್ನು ಓಲೈಸುವ ಭರದಲ್ಲಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ರಶ್ಮಿಕಾ ಮಂದಣ್ಣ ಜರಿದಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಕನ್ನಡದ ಪ್ರೇಕ್ಷಕರಿಗೆ ರಶ್ಮಿಕಾ ಮಂದಣ್ಣ ಅವರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬುದಕ್ಕೆ ಸೋಶಿಯಲ್​ ಮೀಡಿಯಾ ಕಮೆಂಟ್​ಗಳೇ ಸಾಕ್ಷಿ.

ಅದರ ಜೊತೆಯಲ್ಲಿ ಈಗ ಅವರು ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಕೆಣಕುವಂತಹ ಹೇಳಿಕೆ ನೀಡಿದ್ದಾರೆ. ಬಾಲಿವುಡ್​ (Bollywood) ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿರುವ ರಶ್ಮಿಕಾ ಮಂದಣ್ಣ ಅವರು ಹಿಂದಿ ಮಂದಿಯನ್ನು ಓಲೈಸುವ ಭರದಲ್ಲಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಜರಿದಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ‘ರೊಮ್ಯಾಂಟಿಕ್​ ಸಾಂಗ್ಸ್​ ವಿಚಾರದಲ್ಲಿ ಹಿಂದಿ ಚಿತ್ರರಂಗವೇ ಬೆಸ್ಟ್​’ ಎಂದು ರಶ್ಮಿಕಾ ಹೇಳಿದ್ದಾರೆ. ಇದನ್ನು ಇಟ್ಟುಕೊಂಡು ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​ನಲ್ಲಿ ನಟಿಸಿದ ಮೊದಲ ಸಿನಿಮಾ ‘ಮಿಷನ್​ ಮಜ್ನು’. ಆದರೆ ಕಾರಣಾಂತರಗಳಿಂದ ಅದರ ಬಿಡುಗಡೆ ತಡವಾಯಿತು. ಅದಕ್ಕೂ ಮುನ್ನ ‘ಗುಡ್​ ಬೈ’ ರಿಲೀಸ್​ ಆಯಿತು. ಈಗ ‘ಮಿಷನ್​ ಮಜ್ನು’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 2023ರ ಜನವರಿ 20ರಂದು ಈ ಚಿತ್ರ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಅದರ ಪ್ರಮೋಷನ್​ ಸಲುವಾಗಿ ಮೊದಲ ಸಾಂಗ್​ ರಿಲೀಸ್​ ಮಾಡಲಾಗಿದೆ.

‘ಮಿಷನ್​ ಮಜ್ನು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ರೊಮ್ಯಾಂಟಿಕ್​ ಸಾಂಗ್​ಗಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ‘ದಕ್ಷಿಣ ಭಾರತದಲ್ಲಿ ಮಾಸ್​ ಮಸಾಲಾ, ಐಟಂ ಸಾಂಗ್​ಗಳು ಇರುತ್ತವೆ. ಆದರೆ ರೊಮ್ಯಾಂಟಿಕ್​ ಸಾಂಗ್​ ವಿಚಾರದಲ್ಲಿ ಬಾಲಿವುಡ್​ ಬೆಸ್ಟ್​. ಬಾಲಿವುಡ್​ನಲ್ಲಿ ನನ್ನ ಮೊದಲ ರೊಮ್ಯಾಂಟಿಕ್​ ಹಾಡು ಬರುತ್ತಿದೆ. ನೀವೆಲ್ಲ ಕೇಳಬೇಕು ಅಂತ ನಾನು ಸಖತ್​ ಎಗ್ಸೈಟ್​ ಆಗಿದೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಕನ್ನಡದಲ್ಲಿಯೇ ಬೇಕಾದಷ್ಟು ರೊಮ್ಯಾಂಟಿಕ್​ ಹಾಡುಗಳಿವೆ. ದಕ್ಷಿಣ ಭಾರತದಲ್ಲಿ ಇಳೆಯರಾಜ, ಹಂಸಲೇಖ, ರಾಜನ್​-ನಾಗೇಂದ್ರ ಅವರಂತಹ ಮಹಾನ್​ ಸಂಗೀತ ನಿರ್ದೇಶಕರು ಎಲ್ಲ ಕಾಲಕ್ಕೂ ಸಲ್ಲುವಂತಹ ರೊಮ್ಯಾಂಟಿಕ್​ ಹಾಡುಗಳನ್ನು ನೀಡಿದ್ದಾರೆ. ಹಾಗಿದ್ದರೂ ಕೂಡ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​ ಮಂದಿಯೇ ಬೆಸ್ಟ್​ ಎಂದು ಹೇಳಿರುವುದು ಸೌತ್​ ಸಿನಿಮಾಪ್ರೇಮಿಗಳ ಕೋಪಕ್ಕೆ ಕಾರಣ ಆಗಿದೆ.

- Advertisement -

Related news

error: Content is protected !!