Friday, May 3, 2024
spot_imgspot_img
spot_imgspot_img

ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

- Advertisement -G L Acharya panikkar
- Advertisement -
vtv vitla

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಲಯನ್ಸ್ ಜಿಲ್ಲೆ 317D, ಪ್ರದೇಶ V ವಲಯ -1 ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜೂ. 25ರಂದು ಸಂಜೆ 6.30 ಗಂಟೆಗೆ ಸುವರ್ಣ ರಂಗಮಂದಿರ, ವಿಠ್ಠಲ್‌ ಪಿಯು ಕಾಲೇಜು ವಿಟ್ಲದಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿ ಬಿ.ಎಂ.ಭಾರತಿ pmjf-D1, Vise District Governor 317D ಭಾಗವಹಿಸಿ, ಕಾರ್ಯಕ್ರಮವನ್ನು ಲಯನ್‌ ಕುಡ್ಪಿ ಅರವಿಂದ್‌ ಶೆಣೈ pmjf, 2nd Vise District Governor 317D ದೀಪ ಬೆಳಗಿಸಿ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಅಧ್ಯಕ್ಷ ಜಯರಾಮ್‌ ಬಲ್ಲಾಳ್‌, ಕಾರ್ಯದರ್ಶಿ ಹರೀಶ್‌ ಶೆಟ್ಟಿ, ಶ್ವೇತಾ ರವಿಕುಮಾರ್‌, ಕೋಶಾಧಿಕಾರಿಯಾಗಿ ಒ.ಎ. ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ಗಮಿತ ಅಧ್ಯಕ್ಷ ಸಂದೇಶ್ ಶೆಟ್ಟಿ ಅಧಿಕಾರ ಹಸ್ತಾಂತರ ಮಾಡಿದರು.

ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ವಲಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ನೂತನ ಸದಸ್ಯರಾದ ಶ್ರೀರಂಜಿನಿ ರವಿವರ್ಮ, ರಮಾದೇವಿ ಜಯರಾಮ್‌ ಬಲ್ಲಾಳ್, ಸಮಿತಿ ಅಧ್ಯಕ್ಷ ಮೋಹನ್‌ ಕಟ್ಟೆ, ನಿಯೋಜಿತ ವಲಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ,ಸತೀಶ್‌ ಕುಮಾರ್‌ ಆಳ್ವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ RC ಸುದರ್ಶನ್‌ ಪಡಿಯಾರ್‌ ಮತ್ತು ರಾಷ್ಟ್ರೀಯ ಈಜುಪಟು ಚಿನ್ನದ ಪದಕ ವಿಜೇತೆ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಜೋಶ್ನಾ ಇವರನ್ನು ಸನ್ಮಾನಿಸಲಾಯಿತು.

ಸರಿತಾ, ಸೀತಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಶ್ವೇತಾ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಧರ್ಣಪ್ಪ ಗೌಡ, ಚಂದ್ರಹಾಸ ಗೌಡ ಬನ, ಸುರೇಶ್‌ ಬನಾರಿ, ದಿನಾಕರ್‌ ಆಳ್ವ, ವಿ.ಎಸ್‌.ಎಮ್‌ ಇಬ್ರಾಹಿಂ ಆಯೋಜಿಸಿದರು.

- Advertisement -

Related news

error: Content is protected !!