Monday, June 15, 2026
spot_imgspot_img
spot_imgspot_img

ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಾಲಕ ಮಾಡಿದ್ದೇನು…? ಖಾಸಗಿ ಅಂಗದಲ್ಲಿ ಸಿಲುಕಿಕೊಂಡ USB ಕೇಬಲ್‌ ಹೊರತೆಗೆಯಲು ಶಸ್ತ್ರಚಿಕಿತ್ಸೆ..!

- Advertisement -
- Advertisement -

ಲೈಂಗಿಕ ತೃಷೆ ತೀರಿಸಿಕೊಳ್ಳಲು 15 ವರ್ಷದ ಬಾಲಕನೊಬ್ಬ ವಿಚಿತ್ರವಾಗಿ ವರ್ತಿಸಿ ಜೀವಕ್ಕೆ ಆಪತ್ತು ತಂದಿಟ್ಟ ಘಟನೆ ನಡೆದಿದೆ. ಯುಕೆಯಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಶಿಶ್ನದೊಳಗೆ ಯುಎಸ್​ಬಿ ಕೇಬಲ್ ಹಾಕಿಕೊಂಡಿದ್ದಾರೆ. ನಂತರ ವೈದ್ಯರ ತಂಡ ಸರ್ಜರಿ ಮಾಡಿ ಕೇಬಲ್ ಹೊರತೆಗೆದಿದ್ದಾರೆ.

ಈ ಘಟನೆ ೨೦೨೧ರಲ್ಲಿ ನಡೆದಿತ್ತು. ಈ ಬಗ್ಗೆ ಇಂಗ್ಲೆಂಡ್‌ನ ನಿಯತಕಾಲಿಕೆಯೊಂದು ವರದಿ ಭಿತ್ತರಿಸಿತ್ತು. ಬ್ರಿಟಿಷ್ ಜರ್ನಲ್ ಆಫ್ ಸರ್ಜರಿ ನಿಯತಕಾಲಿಕೆಯಲ್ಲಿ ಈ ಸರ್ಜರಿ ಬಗ್ಗೆ ವರದಿ ಪ್ರಕಟಗೊಂಡಿದೆ. ನಂತರದ ದಿನಗಳಲ್ಲಿ ಈ ಸುದ್ದಿ ಎಲ್ಲೆಡೆ ಹರಿದಾಡಿದೆ.

ಯುಎಸ್​ಬಿ ಕೇಬಲ್​ ಅನ್ನು ತನ್ನ ಶಿಶ್ನದ ಒಳಭಾಗಕ್ಕೆ ತುರುಕಿಕೊಂಡಿದ್ದ. ನಂತರ ತಂತಿ ಸಿಕ್ಕಿಹಾಕಿಕೊಂಡಿದ್ದು, ಅದನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ತಂತಿ ಸಿಕ್ಕಿಕೊಂಡಿದ್ದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತ ಬರಲಾರಂಭಿಸಿದೆ. ಹೀಗಾಗಿ ಆತನ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಏನಾಯಿತು ಎಂದು ವೈದ್ಯರು ಪ್ರಶ್ನಿಸಿದ್ದಾರೆ. ಆದರೆ ಬಾಲಕ ತನ್ನ ತಾಯಿ ವೈದ್ಯರ ಕೊಠಡಿಯಿಂದ ಹೊರ ಹೋಗುವವರೆಗೂ ಕಾಯ್ದಿದ್ದ. ಬಳಿಕ ನಡೆದ ಘಟನೆ ವಿವರಿಸಿದ್ದಾನೆ.

ಯುಎಸ್​ಬಿ ವೈರ್​ನ ಎರಡು ಪೋರ್ಟ್​ಗಳು ಬಾಹ್ಯ ಮೂತ್ರನಾಳದಿಂದ ಚಾಚಿಕೊಂಡಿದ್ದು, ತಂತಿಯ ಮಧ್ಯ ಭಾಗವು ಒಳಗೆ ಉಳಿದಿದಿತ್ತು. ವೈದ್ಯರು ಮೊದಲು ಚಿಕಿತ್ಸೆಗೆ ಬಳಸುವ ಲೋಹದ ರಾಡ್​ ಸಹಾಯದಿಂದ ಗಂಟು ಬಿದ್ದ ಬಳ್ಳಿಯನ್ನು ತೆಗೆದುಹಾಕಲು ಪ್ರಯತ್ನಿಸಿದ್ದರು. ಆದರೆ ತಂತಿಯ ಗಂಟುಗಳ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಅವರು ತಂತಿಯನ್ನು ತೆಗೆದುಹಾಕಲು ಹುಡುಗನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಾಲಕನನ್ನು ದೀರ್ಘಾವಧಿಯಲ್ಲಿ ಮೇಲ್ವಿಚಾರಣೆಯಲ್ಲಿ ಇರಿಸಿ ನಂತರ ಡಿಸ್ಚಾರ್ಜ್ ಮಾಡಿದ್ದಾರೆ.

astr
- Advertisement -

Related news

error: Content is protected !!