Thursday, May 2, 2024
spot_imgspot_img
spot_imgspot_img

ಲೋನ್‌ ಆ್ಯಪ್ ಸೆಂಟರ್‌ಗಳ ಮೇಲೆ ದಾಳಿ; ಗ್ಯಾಲರಿಯಿಂದ ಕದ್ದ ವೈಯಕ್ತಿಕ ಫೋಟೋ ತೋರಿಸಿ ಬ್ಲಾಕ್‌ ಮೇಲ್

- Advertisement -G L Acharya panikkar
- Advertisement -

ತಕ್ಷಣ ಸಾಲ ನೀಡುವ ಮೊಬೈಲ್‌ ಆಪ್‌ ಕಾಲ್‌ ಸೆಂಟರ್‌ ಗಳ ಮೇಲೆ ಪುಣೆ ಸೈಬರ್‌ ಕ್ರೈಂ ಪೊಲೀಸರು ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಗೂಗಲ್‌ ಪ್ಲೇ ಆಪ್‌ ಸೇರಿದಂತೆ ವಿವಿಧೆಡೆ ಲಭ್ಯವಿರುವ ಇನ್‌ ಸ್ಟೆಂಟ್‌ ಮೊಬೈಲ್‌ ಆಪ್‌ ಮೇಲೆ ದಾಳಿ ಮಾಡಲಾಗಿದ್ದು, ಆರೋಪಿಗಳಿಂದ 70 ಲಕ್ಷ ರೂ., ನಗದು ಸಿಪಿಯು ಹಾಗೂ 48 ಮೊಬೈಲ್‌ ಫೋನ್‌ ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಬಳಿ 1 ಲಕ್ಷ ಜನರ ಮಾಹಿತಿ ಲಭ್ಯವಿದ್ದು, ಗ್ರಾಹಕರು ಆಪ್‌ ಡೌನ್‌ ಲೋಡ್‌ ಮಾಡಿಕೊಂಡ ನಂತರ ಫೋಟೊ ಗ್ಯಾಲರಿ ಅನುಮತಿ ಕೇಳುತ್ತಿತ್ತು. ಎಲ್ಲಾ ಅನುಮತಿ ಪಡೆದ ನಂತರ ಗ್ರಾಹಕರಿಗೆ ಆರಂಭದಲ್ಲಿ 500ರಿಂದ 7000 ರೂ.ವರೆಗೆ ಸಾಲ ನೀಡುತ್ತಿದ್ದರು. ಸಾಲ ನೀಡಿ ವಾರದೊಳಗೆ ಬಡ್ಡಿ ಅಥವಾ ಅಸಲು ಪಾವತಿಸಬೇಕಿತ್ತು. ಒಂದು ವೇಳೆ ಮರುಪಾವತಿ ಮಾಡದೇ ಇದ್ದರೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು. ನಂತರ ಗ್ಯಾಲರಿಯಿಂದ ಕದ್ದ ವೈಯಕ್ತಿಕ ಫೋಟೊಗಳನ್ನು ತೋರಿಸಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದರು ಎಂದು ಆರೋಪಗಳು ಕೇಳಿ ಬಂದಿದ್ದವು.

ಪುಣೆ ಸೈಬರ್‌ ಪೊಲೀಸರಿಗೆ 2020ರಿಂದ 2022ರ ಅವಧಿಯಲ್ಲಿ ಸುಮಾರು 4700 ದೂರುಗಳು ಬಂದಿದ್ದವು. ಲೋನ್‌ ಆಪ್‌ ಕಂಪನಿಗಳ ನಿಂದನೆ ಹಾಗೂ ಬೆದರಿಕೆ ಕುರಿತು ಬಹುತೇಕ ದೂರುಗಳು ಬಂದಿದ್ದವು. ಪ್ರಕರಣದಲ್ಲಿ ಇದುವರೆಗೆ 18 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ 6 ಮಹಿಳೆಯರು ಸೇರಿದ್ದಾರೆ. ಮೂಲಗಳ ಪ್ರಕಾರ 1 ಲಕ್ಷ ಜನರು ಲೋನ್‌ ಆಪ್‌ ನಲ್ಲಿ ಸಾಲ ಪಡೆದಿದ್ದಾರೆ ಎನ್ನಲಾಗಿದೆ.

astr
- Advertisement -

Related news

error: Content is protected !!