Saturday, May 4, 2024
spot_imgspot_img
spot_imgspot_img

ಲೌಡ್ ಸ್ಪೀಕರ್ ಆದೇಶ – ಹಿಂದೂ ಧಾರ್ಮಿಕ ಕೇಂದ್ರಗಳೂ ಪಾಲನೆ ಮಾಡಬೇಕು; ಪೇಜಾವರ ಶ್ರೀ

- Advertisement -G L Acharya panikkar
- Advertisement -

ಸುಪ್ರೀಂಕೋರ್ಟ್ ನೀಡಿರುವ ಲೌಡ್ ಸ್ವೀಕರ್ ಆದೇಶ ಹಿಂದೂ ಧರ್ಮಕ್ಕೂ ಅನ್ವಯವಾಗುತ್ತದೆ. ಧ್ವನಿವರ್ಧಕ ಬಳಸುವುದಾದರೆ ತೀವ್ರತೆ ಕಡಿಮೆ ಮಾಡಿ ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳು ಇದನ್ನು ಅನುಸರಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ನಿಯಮಕ್ಕೆ ಬದ್ಧರಾಗಿ ನಡೆದುಕೊಂಡರೆ ಯಾವುದೇ ಗೊಂದಲ ಇರುವುದಿಲ್ಲ. ನಾವೇ ರಚಿಸಿದ ಸಂವಿಧಾನ, ಸರ್ಕಾರ, ಕೋರ್ಟ್ ಎಲ್ಲವೂ ಇದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ಉಳಿಯಲು ಪ್ರಜೆಗಳು ನಿಯಮ ಪಾಲಿಸುವುದು ಅತ್ಯಗತ್ಯವಾಗಿದೆ. ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆಗೆ ಮಾರ್ಗದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಿಯಮ ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಟ್ಟರು.

ವಿಶೇಷ ದಿನಗಳು, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡಬೇಕು. ಸುಪ್ರೀಂ ಕೋರ್ಟ್ ಒಂದು ವರ್ಗ, ಒಂದು ಸಮಾಜಕ್ಕೆ ಆದೇಶ ನೀಡಿಲ್ಲ. ಕೋರ್ಟ್ ಆದೇಶ ಎಲ್ಲರಿಗೂ ಅನ್ವಯ ಆಗುತ್ತದೆ. ಶಬ್ದದ ತೀವ್ರತೆಗೊಂದು ನಿಯಮ ನಿಗದಿಯಾಗಿದೆ. ಇದರಿಂದಾಗಿ ಹಿಂದೂ ಧಾರ್ಮಿಕ ಕೇಂದ್ರಗಳೂ ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು.

- Advertisement -

Related news

error: Content is protected !!