Friday, June 5, 2026
spot_imgspot_img
spot_imgspot_img

ಲ್ಯಾಬ್ರಡಾರ್ ನಾಯಿ ಹೊಟ್ಟೆಯೊಳಗೆ ಎನ್ 95 ಮಾಸ್ಕ್.!

- Advertisement -
- Advertisement -

ಕಾಸರಗೋಡು : ಸಾಕು ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಸೇರಿಕೊಂಡಿರುವ ಘಟನೆ ನಡೆದಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಮಾಸ್ಕ್ ತೆಗೆಯಲಾಗಿದೆ.

ನೀಲೇಶ್ವರದ ರಾಜನ್ ಎಂಬುವರು ಸಾಕಿರುವ ಲ್ಯಾಬ್ರಡಾರ್ ತಳಿಯ ನಾಯಿ ಕೆಲವು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಪಶುವೈದ್ಯರ ಸಲಹೆಯಂತೆ ಕಣ್ಣೂರು ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಲಾಯಿತು.


ವರದಿ ಪರಿಶೀಲಿಸಿದ ವೈದ್ಯರಿಗೆ ಶಾಕ್ ಆಗಿತ್ತು, ಕಾರಣ ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಒಂದು ಸೇರಿಕೊಂಡಿತ್ತು.ನಂತರ ಶಸ್ತ್ರಚಿಕಿತ್ಸೆ ಮೂಲಕ ಮಾಸ್ಕ್ ಅನ್ನು ಹೊರತೆಗೆಯಲಾಯಿತು.

- Advertisement -

Related news

error: Content is protected !!