Tuesday, April 16, 2024
spot_imgspot_img
spot_imgspot_img

ವಿಟ್ಲ: ನ. 27 ರಂದು ಮೆಗಾ ಲಸಿಕಾ ಅಭಿಯಾನ; ಜಾಗೃತಿ ಮೂಡಿಸುವ ಅಂಗವಾಗಿ ವಿವಿಧ ಸಂಘಟನೆಗಳ ವತಿಯಿಂದ ಜಾಗೃತಿ ಜಾಥಾ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ವಿಟ್ಲ: ನ. 27ರಂದು ನಡೆಯಲಿರುವ ಲಸಿಕ ಮೆಗಾ ಮೇಳದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರ, ಲಯನ್ಸ್ ಕ್ಲಬ್ ವಿಟ್ಲ ಸಿಟಿ, ಸ್ಕೌಟ್ ಅಂಡ್ ಗೈಡ್ಸ್, ಪಟ್ಟಣ ಪಂಚಾಯತ್ ವಿಟ್ಲ ಇದರ ಸಹಯೋಗದೊಂದಿಗೆ ಕೋವಿಡ್ ಲಸಿಕೆಯ ಬಗ್ಗೆ ಪ್ರಚಾರ ಆಂದೋಲನವನ್ನು ಜಾಥಾ ಮೂಲಕ ಹಮ್ಮಿಕೊಳ್ಳಲಾಯಿತು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ವೇದಾವತಿ ಜೆ ಬಲ್ಲಾಳ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಇಂದಿರಾ, ಪ್ರಾಥಮಿಕ ಆರೋಗ್ಯಧಿಕಾರಿ ದೀಪಾ ಇವರು ಭಾಗವಹಿಸಿದ್ದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಎಲ್ಲರನ್ನು ಸ್ವಾಗತಿಸುತ್ತಾ ಕೋವಿಡ್ ಲಸಿಕೆ ವೈದ್ಯ ವಿಜ್ಞಾನದ ಅಪೂರ್ವ ಕೊಡುಗೆ. ಎರಡನೇ ಡೋಸ್ ಲಸಿಕೆ ಪಡೆಯುವವರು ನಿರ್ಲಕ್ಷಿಸಬಾರದು ಎಂಬುದಾಗಿ ತಿಳಿಸಿದರು.

ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಕ್ಲಬ್ ಪ್ರಾಂತೀಯ ಸಲಹೆಗಾರ ಸುದರ್ಶನ ಪಡಿಯಾರ್, ಪದಾಧಿಕಾರಿಗಳಾದ ಸದಾನಂದಗೌಡ ಸೇರಾಜೆ, ಕೃಷ್ಣ, ಹರೀಶ್ ಶೆಟ್ಟಿ ಇವರು ಜಾಥಾದಲ್ಲಿ ಭಾಗವಹಿಸಿದ್ದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳಾದ ಜಯಶ್ರೀ, ಸಂಧ್ಯಾ, ಹೆಲೆನ್, ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹಾಗೂ ಸಂತ ರೀತಾ ಶಾಲೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯತ್ ನ ಆರಕ್ಷಕ ಠಾಣೆಯ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಲಸಿಕೆ ನಡೆಯುವ ಕೇಂದ್ರಗಳು

ಸಮುದಾಯ ಆರೋಗ್ಯ ಕೇಂದ್ರ ವಿಟ್ಲ
ಚಂದಳಿಕೆ ಅಂಗನವಾಡಿ ಕೇಂದ್ರ
ಬೋಳಂತೂರು ಉಪಕೇಂದ್ರ
ವಿಟ್ಲಪಡ್ನೂರು ಪುಡೆಮಜಲು ಅಂಗನವಾಡಿ ಕೇಂದ್ರ
ವೀರಕಂಬದ ಮಜಿ ಅಂಗನವಾಡಿ ಕೇಂದ್ರ
ಕೋಡಪದವು ಉಪಕೇಂದ್ರ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಪ್ರಥಮ ಡೋಸ್ ಹಾಗೂ ಪ್ರಥಮ ಡೋಸ್ ಆಗಿ 84 ದಿನ ಪೂರೈಸಿದವರಿಗೆ ಎರಡನೇ ಡೋಸ್ ನೀಡಲಾಗುವುದು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 7 ಗಂಟೆಯಿ0ದ ಸಾಯಂಕಾಲ 7 ಗಂಟೆಯವರೆಗೆ ಲಸಿಕೆ ನೀಡಲಾಗುವುದು. ಅಲ್ಲದೆ ಸಂಚಾರಿ ಲಸಿಕಾ ತಂಡ ಪಟ್ಟಣ ಪಂಚಾಯತ್ ವತಿಯಿಂದ ಲಭ್ಯವಿದೆ.

vtv vitla
- Advertisement -

Related news

error: Content is protected !!