- Advertisement -
- Advertisement -
ಕೊರೊನಾದಿಂದಾಗಿ ಮುನ್ನೆಲೆಗೆ ಬಂದ ಹೊಸ ಶಬ್ದವೆಂದರೆ ವರ್ಕ್ ಫ್ರಂ ಹೋಂ. ಮೌಸ್, ಕೀ ಬೋರ್ಡ್ ಬಿಟ್ರೆ ಬೇರೆ ಜಗತ್ತೇ ಇಲ್ಲವೇನೋ ಎಂಬಂತೆ ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದವರಿಗೆ ವರ್ಕ್ ಫ್ರಂ ಹೋಂ ಕೊಂಚ ಮಟ್ಟಿಗೆ ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಕೊಟ್ಟಿತು.

ಇರುವ ಸ್ಥಳದಿಂದಲೇ ಆಫೀಸ್ ಕೆಲಸ ಮಾಡು ಎಂದರೆ ಇಲ್ಲೊಬ್ಬ ತನ್ನ ಮದುವೆಯಲ್ಲೇ ಲ್ಯಾಪ್ ಟಾಪ್ ಹಿಡಿದು ಕುಳಿತುಕೊಂಡಿದ್ದಾನೆ.

ಮದುವೆ ಶಾಸ್ತ್ರ ಮಾಡಲು ಪೋಷಕರು ಕಾಯ್ತಾಯಿದ್ರೆ ವರ ಮಾತ್ರ ತನಗೆ ಏನೂ ಸಂಬಂಧವೇ ಇಲ್ಲವೆನ್ನುವಂತೆ ಲ್ಯಾಪ್ಟಾಪ್ ಹಿಡಿದು ಕುಳಿತುಕೊಂಡಿದ್ದ.

ಭಾವಿ ಪತಿಯ ಸ್ಥಿತಿ ನೋಡಿ ವಧು ಬಿದ್ದು ಬಿದ್ದು ನಕ್ಕರೆ, ಪುರೋಹಿತರು ವರನ ಮುಖ ನೋಡುತ್ತಾ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.


- Advertisement -