Friday, March 29, 2024
spot_imgspot_img
spot_imgspot_img

‘ಸ್ಟಾರ್ಟ್‌ ಅಪ್‌‌ಗಳು ಯುವ ಭಾರತದ ಸ್ಪೂರ್ತಿ’ – ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ದೇಶದಲ್ಲಿ, ಗ್ರಾಮಗಳಲ್ಲಿಯೂ ಸ್ಟಾರ್ಟ್ ಅಪ್ ಪ್ರಾರಂಭವಾಗಿದ್ದು, ಸ್ಟಾರ್ಟ್‌ ಅಪ್‌‌ಗಳು ಯುವ ಭಾರತದ ಸ್ಪೂರ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮನ್ ಕಿ ಬಾತ್‌ನ 89 ನೇ ಆವೃತ್ತಿಯಲ್ಲಿ ದೇಶದ ಜನ್ನರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತಮ ಮಾರ್ಗದರ್ಶನದೊಂದಿಗೆ ಸ್ಟಾರ್ಟ್ ಅಪ್ ವಿಸ್ತರಣೆಯಾಗುತ್ತಿದ್ದು, ಸ್ಟಾರ್ಟ್‌ ಅಪ್‌ ಗಳು ಯುವ ಭಾರತದ ಸ್ಪೂರ್ತಿ. ಅವು ನವ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ ಎಂದರು. ಇನ್ನು ಸರಿಯಾದ ಮಾರ್ಗದರ್ಶನವು ಸ್ಟಾರ್ಟ್ ಅಪ್‌ ಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು. ಭವಿಷ್ಯದಲ್ಲಿ ನಾವು ಭಾರತದಲ್ಲಿ ಹೊಸ ಎತ್ತರವನ್ನು ತಲುಪುವ ಸ್ಟಾರ್ಟ್‌ ಅಪ್‌ ಗಳಿಗೆ ಸಾಕ್ಷಿಯಾಗುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.

ಜೂನ್ 21 ರಂದು ಜಗತ್ತು ಯೋಗ ದಿನವನ್ನು ಆಚರಿಸುತ್ತಿದ್ದು, ಈ ವರ್ಷದ ಯೋಗ ದಿನದ ಥೀಮ್ ‘ಯೋಗ ಫಾರ್ ಮಾನವೀಯತೆ ಆಗಿದೆ ಎಂದು ಹೇಳಿದ್ದಾರೆ. ಇನ್ನು ಭಾರತ ದೇಶವು ವಿಭಿನ್ನ ಭಾಷೆಗಳು, ಉಪಭಾಷೆಗಳನ್ನು ಹೊಂದಿದ್ದು, ನಮ್ಮ ದೇಶದಲ್ಲಿ ಈ ಭಾಷಾ ವೈವಿಧ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅನೇಕ ಜನರು ನಮ್ಮ ದೇಶದಲ್ಲಿದ್ದಾರೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!