Saturday, May 11, 2024
spot_imgspot_img
spot_imgspot_img

ವಾಹನ ಸವಾರರಿಗೆ ಗುಡ್ ನ್ಯೂಸ್.. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

- Advertisement -G L Acharya panikkar
- Advertisement -

ಇಂಧನ, ಎಣ್ಣೆ, ಜೋಳ ಇತ್ಯಾದಿ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಪರಿಣಾಮವಾಗಿ ಅವುಗಳ ಬೆಲೆ ಇಳಿಯುವ ನಿರೀಕ್ಷೆ ಇದೆ. ಹಣದುಬ್ಬರ ನಿಯಂತ್ರಣಕ್ಕೆ ತರಲು ಈ ಹೆಜ್ಜೆ ಇಡಲಾಗುತ್ತಿದೆ.

ವಾಹನ ಸವಾರರಿಗೆ ಖುಷಿಯ ಸುದ್ದಿ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಎಣ್ಣೆ, ಪೆಟ್ರೋಲ್‌ಗಳ ಬೆಲೆಯಲ್ಲೂ ತುಸು ಇಳಿಕೆಯಾಗಬಹುದು. ಹಣದುಬ್ಬರ ಮಿತಿಮೀರಿ ಏರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂಧನದ ಮೇಲಿನ ತೆರಿಗೆಯನ್ನು ಸರ್ಕಾರ ಕಡಿಮೆ ಮಾಡಲು ನಿರ್ಧರಿಸಿದೆ. ಹಾಗೆಯೇ, ಜೋಳ ಇತ್ಯಾದಿ ಆಹಾರವಸ್ತುಗಳ ಮೇಲಿನ ತೆರಿಗೆಯನ್ನೂ ಸರ್ಕಾರ ತಗ್ಗಿಸಲು ಯೋಜಿಸಿದೆ. ಹಣದುಬ್ಬರ ಕಡಿಮೆ ಮಾಡಲು ಆರ್‌ಬಿಐ ಕೆಲ ಕ್ರಮಗಳನ್ನು ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಹೆಜ್ಜೆ ಇಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ.

ಇದೇ ವೇಳೆ, ದೇಶೀಯವಾಗಿ ಉತ್ಪಾದನೆಯಾಗುವ ಕಚ್ಛಾ ತೈಲ, ವೈಮಾನಿಕ ಟರ್ಬೈನ್ ಇಂಧನ ಮತ್ತು ಡೀಸೆಲ್ ರಫ್ತು ಮೇಲಿನ ವಿಂಡ್‌ಫಾಲ್ ಪ್ರಾಫಿಟ್ ತೆರಿಗೆಯನ್ನು ಕಡಿಮೆಗೊಳಿಸಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ತೈಲದ ಮೇಲಿನ ತೆರಿಗೆಯನ್ನು ಪ್ರತೀ ಟನ್‌ಗೆ 5,050 ರೂ.ನಿಂದ 4,350 ರೂಗೆ ಇಳಿಸಲಾಗಿದೆ. ಇನ್ನು, ಏವಿಯೇಶನ್ ಟರ್ಬೈನ್ ಫುಯಲ್ ಮೇಲೆ ವಿಧಿಸಲಾಗುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತೀ ಲೀಟರ್‌ಗೆ 6 ರೂನಿಂದ 1 ರೂಗೆ ಇಳಿಕೆ ಮಾಡಲಾಗಿದೆ. ಹಾಗೆಯೇ, ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತೀ ಲೀಟರ್‌ಗೆ 7.5 ರೂನಿಂದ 3 ರೂಪಾಯಿಗೆ ತಗ್ಗಿಸಲಾಗಿದೆ.

- Advertisement -

Related news

error: Content is protected !!