Monday, June 15, 2026
spot_imgspot_img
spot_imgspot_img

ವಿಟ್ಲ: ಮತ್ತೊಂದು ಲವ್ ಜಿಹಾದ್ ಪ್ರಕರಣ ಪತ್ತೆ; ವಿಜಯ್ ಎಂಬ ಹೆಸರಿನಲ್ಲಿ ವಂಚಿಸಿದ ಹುಸೇನ್

- Advertisement -
- Advertisement -

ವಿಟ್ಲ: ಕಳೆದ ಒಂದು ವಾರದಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿರಸಿ ಮೂಲದ ಅನ್ಯಕೋಮಿನ ಜೋಡಿಗಳು ವಿಟ್ಲದ ಪಳಿಕೆಯಲ್ಲಿ ಪತ್ತೆಯಾಗಿದ್ದಾರೆ.

ವಿಟ್ಲ ಬೊಬ್ಬೆಕೇರಿ ಪೆಟ್ರೋಲ್ ಬಂಕ್ ನಲ್ಲಿ ಟ್ಯಾಂಕರ್ ಲಾರಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡ ಈ ಅನ್ಯಕೋಮಿನ ಯುವಕ ತಾನು ಹಿಂದೂ ನನ್ನ ಹೆಸರು ವಿಜಯ್ ಎಂಬುವುದಾಗಿ ಎಲ್ಲರನ್ನು ನಂಬಿಸಿ ವಂಚಿಸಿದ್ದಾನೆ.

ಇದೀಗ ಕೆಲ ದಿನಗಳಿಂದ ವಿಟ್ಲ ಪಳಿಕೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಹಿಂದೂ ಹುಡುಗಿಯ ಜೊತೆ ವಾಸವಿದ್ದು, ಆತ ತನ್ನ ಕೈಗೆ ಹಿಂದೂ ಧರ್ಮದ ನೂಲನ್ನು ಕಟ್ಟಿದ್ದ. ಈತ ಅನ್ಯ ಕೋಮಿನ ಯುವಕ ಎಂಬ ವಿಚಾರವನ್ನು ತಿಳಿದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿ ಜೋಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೋಡಿಗಳನ್ನು ವಶ ಪಡಿಸಿಕೊಂಡ ವಿಟ್ಲ ಪೊಲೀಸರು ಆತನನ್ನು ವಿಚಾರಿಸಿದ್ದು ಈ ವೇಳೆ ಮುಸ್ಲಿಂ ಯುವಕನಗಿದ್ದು ಹುಸೈನ್ ಎಂಬುವುದಾಗಿ ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಿದೆ.

- Advertisement -

Related news

error: Content is protected !!