Sunday, May 5, 2024
spot_imgspot_img
spot_imgspot_img

ವಿಟ್ಲ: ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ನೀಡಿದರೆಂದು ಶಂಕಿಸಿ ಹಾರ್ಡ್’ವೇರ್ ಅಂಗಡಿ ಮುಂಭಾಗದಲ್ಲಿ ಇಟ್ಟ ಗ್ಲಾಸ್’ ಬಾಕ್ಸ್’ ಗೆ ಹಾನಿ; ದೂರು ದಾಖಲು..!

- Advertisement -G L Acharya panikkar
- Advertisement -

ವಿಟ್ಲ: ಅಕ್ರಮ ಮಧ್ಯ ಮಾರಾಟದ ಬಗ್ಗೆ ದೂರು ನೀಡಿದರೆಂದು ಶಂಕಿಸಿ ತನ್ನ ಗ್ಲಾಸ್ & ಹಾರ್ಡ್’ವೇರ್ ಅಂಗಡಿ ಮುಂಭಾಗದಲ್ಲಿ ಮಾರಾಟ ಮಾಡಲು ಇಟ್ಟಿದ್ದ ಗ್ಲಾಸ್’ ನ ಬಾಕ್ಸ್ ನ್ನು ಒಡೆದು ಹಾಕಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಡ್ಕಿದು ಗ್ರಾಮದ ಕಬಕದ ಮಹಾದೇವಿ ಗ್ಲಾಸ್ & ಹಾಡ್೯ವೇರ್ ಮಾಲಕ ರಮೇಶ್ ಗೌಡರವರು ದೂರುದಾರರಾಗಿದ್ದಾರೆ.

vtv vitla

ರಮೇಶ್ ಗೌಡ ಅವರಿಗೆ ಕಬಕ ಕುಳದಲ್ಲಿ ಶ್ರೀ ಮಹಾದೇವಿ ಗ್ಲಾಸ್ & ಹಾರ್ಡ್ ವೇರ್ ಎಂಬ ಅಂಗಡಿಯಿದ್ದು, ಅದೇ ವಠಾರದಲ್ಲಿ ರಾಮಣ್ಣ ಪೂಜಾರಿ ಮಾಲಕತ್ವದ ಗೀತಾ ಬಾರ್ & ರೆಸ್ಟೋರೆಂಟ್ ಇದೆ. ಈ ಬಾರ್ ನಲ್ಲಿ ಅಕ್ರಮವಾಗಿ ಒಂದು ಕೌಂಟರ್ ತೆರೆದಿದ್ದರು. ಇಲ್ಲಿ ಮದ್ಯ ಕುಡಿಯಲು ಬರುವವರು ನಮ್ಮ ಗೋಡೌನ್ ಮುಂಭಾಗದಲ್ಲೇ ಉಗುಳಿಕೊಂಡು ಹೋಗುತ್ತಿದ್ದಾರೆ. ಬಗ್ಗೆ ರಮೇಶ್ ಗೌಡ ಅವರು ಇಡ್ಕಿದು ಪಂಚಾಯತ್ ಗೆ ದೂರು ನೀಡಿರುತ್ತಾರೆ.

ಅಲ್ಲದೇ ಕರ್ಫ್ಯೂ ಸಮಯದಲ್ಲಿ ಬಾರ್ ನಿಂದ ಅಕ್ರಮವಾಗಿ ಮದ್ಯಮಾರಾಟವಾಗಿರುವ ಬಗ್ಗೆ ಯಾರೋ ಹೊರಗಿನವರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು, ಇದರ ಬಗ್ಗೆ ಶಂಕೆ ವ್ಯಕ್ತಪಡಿಸಿ ರಮೇಶ್ ಗೌಡ ಅವರ ಅಂಗಡಿಯ ಮುಂಭಾಗದಲ್ಲಿ ಇಟ್ಟ ಸುಮಾರು 75000 ಮೌಲ್ಯದ ಗಾಜು(ಗ್ಲಾಸ್) ಬಾಕ್ಸ್ ನ್ನು ಒಡೆದುಹಾಕಿದ್ದಾರೆ ಎಂದು ರಮೇಶ್ ಗೌಡ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಗೀತಾ ಬಾರ್ & ರೆಸ್ಟೋರೆಂಟ್ ಮಾಲಕ ರಾಮಣ್ಣ ಪೂಜಾರಿ ಮತ್ತು ಕೆಲಸದವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!