Sunday, June 14, 2026
spot_imgspot_img
spot_imgspot_img

ವಿಟ್ಲ : ಅಕ್ರಮ ಮದ್ಯ ಮಾರಾಟ ; ಸೊತ್ತುಗಳು ಪೊಲೀಸ್ ವಶಕ್ಕೆ

- Advertisement -
- Advertisement -

ವಿಟ್ಲ : ಬಂಟ್ವಾಳ ಅಳಿಕೆ ಗ್ರಾಮದ ಕುದ್ದುಪದವು ನಿವಾಸಿ ಆನಂದ ಪೂಜಾರಿರವರು ತನ್ನ ಮನೆಯ ಪಕ್ಕದಲ್ಲಿರುವ ಅಡಿಕೆ ಕೊಠಡಿಯಲ್ಲಿ ಮದ್ಯದ ಬಾಟ್ಲಿಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದು, ವಿಟ್ಲ ಠಾಣಾ ಪಿಎಸ್‌ಐ ಸಂದೀಪ್‌ ಕುಮಾರ್‌ ಶೆಟ್ಟಿರವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ‌ ನಡೆಸಿದ್ದಾರೆ.

ಸದ್ರಿ ಆನಂದ ಪೂಜಾರಿ ಪರಾರಿಯಾಗಲು ಪ್ರಯತ್ನಿಸಿದ್ದು ಆತನನ್ನು ಹಿಡಿದು ವಿಚಾರಿಸಿದಾಗ ಯಾವುದೇ ಪರವಾಣಿಗೆ ಯಾ ದಾಖಲಾತಿಗಳನ್ನು ಹೊಂದದೆ ಕೊಠಡಿಯೊಳಗೆ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ದಾಳಿ ವೇಳೆ ಮೈಸೂರು ಲ್ಯಾನ್ಸರ್‌ ಕಂಪನಿಯ 90MLನ ಟೆಟ್ರಾ ಪ್ಯಾಕೇಟ್‌ಗಳು-61, ಓರಿಜಿನಲ್‌ ಚಾಯ್ಸ್‌ ಕಂಪನಿಯ 90MLನ 19 ಟೆಟ್ರಾ ಪ್ಯಾಕೇಟ್‌ಗಳು, ಅಂದಾಜು 2800/-ರೂಪಾಯಿ ಮೌಲ್ಯದ , 7.200 ಲೀಟರ್‌ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!