Friday, May 3, 2024
spot_imgspot_img
spot_imgspot_img

ವಿಟ್ಲ: ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತಪ್ರವಚನ; ಠಾಣೆಯ ಮುಂದೆ ಧರಣಿ ಕುಳಿತ ಹಿಂ.ಜಾ.ವೇ ಕಾರ್ಯಕರ್ತರು- ಪ್ರಕರಣ ದಾಖಲು

- Advertisement -G L Acharya panikkar
- Advertisement -
vtv vitla

ವಿಟ್ಲ : ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ರಾಜಕಮಲ್‌ ಎಂಬ ಖಾಸಗಿ ಹಾಲ್‌ಗೆ ವಿದ್ಯಾರ್ಥಿಗಳನ್ನು  ಕರೆಸಿಕೊಂಡು ಅಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿ ಪ್ರಚೋದನಾಕಾರಿ ಭಾಷಣ ಮಾಡಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದ ಹಾಗೂ  ಮಾನಸಿಕವಾಗಿ ಕಿರುಕುಳ ನೀಡಿರುವ ಬಗ್ಗೆ ವಿಟ್ಲ ಠಾಣೆ ದೂರು ನೀಡಿದ್ದು, ಶಾಲೆಯ ಮುಖ್ಯೋಪಾಧ್ಯಯರ ಸಹಿತ ಮೂವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಪು ಗ್ರಾಮದ ನೆಕ್ಕರೆ ಮನೆ ನಿವಾಸಿ ಮಾಧವ ಮೂಲ್ಯ ಎಂಬವರು ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾದ್ಯಯರಾದ ಟಿ ಆರ್ ನಾಯಕ್‌ , ರಫೀಕ್‌ ಮಾಸ್ಟರ್ ಆತೂರ್ ಹಾಗೂ ನುಸ್ರುತುಲ್‌ ಇಸ್ಲಾಂ ಯಂಗ್‌ ಮೆನ್ಸ್ ಅಸೋಸಿಯಷನ್‌ ಸಂಘಟನಾಕಾರರು ಆರೋಪಿಗಳ ಅವರ ವಿರುದ್ದ ಕೇಪು ಗ್ರಾಮದ ನೆಕ್ಕರೆ ಮನೆ ನಿವಾಸಿ ಮಾಧವ ಮೂಲ್ಯ ದೂರು ನೀಡಿದ್ದರು.

ನುಸ್ರುತುಲ್ ಇಸ್ಲಾಮಿಕ್ಯಂಗ್ ಮೆನ್ಸ್ ಅಸೋಸಿಯೇಷನ್(NIYA) ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಯನಡ್ಕ ಜನತಾ ಹೈಸ್ಕೂಲ್ ನ ವಿದ್ಯಾರ್ಥಿಗಳನ್ನು ಅದರಲ್ಲೂ ಹಿಂದೂ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತೆರಳುವಂತೆ ಶಾಲಾ ಪ್ರಾಂಶುಪಾಲರಾದ ಟಿ ಆರ್ ನಾಯಕ್‌, ತಿಳಿಸಿದ್ದಾಗಿ ವಿದ್ಯಾ ರ್ಥಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಮಕ್ಕಳ ಹಾದಿ ತಪ್ಪಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಹಾಗೂ ಹಿಂದೂ ಮುಖಂಡರು ಪೊಲೀಸ್ ಅಧಿಕಾರಿಗಳ ಬಳಿ ಆಗ್ರಹಿಸಿದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡ ಹರಿಪ್ರಸಾದ್‌ ಯಾದವ್, ವಿಟ್ಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ , ದಯಾನಂದ ಉಜಿರೆಮಾರ್, ಶ್ರೀಕೃಷ್ಣ ವಿಟ್ಲ , ಅಕ್ಷಯ್‌ ರಜಪೂತ್, ಗಣೇಶ್ ಅಡ್ಯನಡ್ಕ , ಕೇಪು ಗ್ರಾಮಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ , ಮಾಜಿ ಅಧ್ಯಕ್ಷ ತಾರಾನಾಥ್ ಆಳ್ವ , ಪುರುಷೋತ್ತಮ ಕಲ್ಲಂಗಳ, ಉಪಾಧ್ಯಕ್ಷ ರಾಘವ ಮಣಿಯಾಣಿ, ಜಾಗರಣ ಪ್ರಮುಖ್ ಹರ್ಷ ರೈ ಕಲ್ಲಂಗಳ, ನವೀನ್‌ ಕೋಲ್ಪೆ ಹಾಗೂ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.

ಠಾಣೆಯ ಮುಂಭಾಗ ನೂರಾರು ಮಂದಿ ಹಿಂದೂ ಕಾರ್ಯಕರ್ತರು ಜಮಾಯಿಸಿ, ಸ್ಥಳಕ್ಕೆ ಶಾಸಕರು ಆಗಮಿಸದ ಹಿನ್ನೆಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ವರದಿಯಾಗಿದೆ. ಹಿಂದೂ ಕಾರ್ಯಕರ್ತರು ಶಾಸಕ ಸಂಜೀವ ಮಠಂದೂರುರವರಿಗೆ ಕರೆಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಿಲ್ಲಾಧಿಕಾರಿಯವರ ಬಳಿ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿರವರೆಗೂ ನೂರಾರು ಹಿಂದೂ ಕಾರ್ಯಕರ್ತರು ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಮತಾಂತರ ಕಾಯ್ದೆ ಹಾಕುವ ಭರವಸೆ ನೀಡಿದ್ದು , ಬಳಿಕ ಕಾರ್ಯಕರ್ತರು ಠಾಣೆಯಿಂದ ತೆರಳಿದರು.

- Advertisement -

Related news

error: Content is protected !!