Monday, April 29, 2024
spot_imgspot_img
spot_imgspot_img

ಪತಿಯ ಶವದ ಮುಂದೆ ಅಳುತ್ತಲೇ ಪ್ರಾಣ ಬಿಟ್ಟ ಪತ್ನಿ

- Advertisement -G L Acharya panikkar
- Advertisement -

ಹಾಸನ: ಪತಿಯ ಶವದ ಮುಂದೆ ಅಳುತ್ತಲೇ ಪತ್ನಿ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ.

ರವೀಶ್ (39) ಹಾಗೂ ಪ್ರಮೀಳಾ (32) ಮೃತ ದಂಪತಿ. ನಿನ್ನೆ ರಾತ್ರಿ ರವೀಶ್​ ಹೃದಯಾಘಾತದಿಂದ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಪತಿಯ ಶವದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಕೊನೆಯುಸಿರೆಳೆದಿದ್ದಾಳೆ. ಇನ್ನು ದಂಪತಿ ಸಾವಿನಲ್ಲೂ ಒಂದಾದರೆ, ಇನ್ನೊಂದೆಡೆ ದಂಪತಿ ಇಬ್ಬರು ಗಂಡು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಶವಗಳ ಮುಂದೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ದಂಪತಿ ಸಾವಿಗೆ ಗ್ರಾಮಸ್ಥರು ಕೂಡ ಕಂಬನಿ ಮಿಡಿದಿದ್ದಾರೆ.

ಬೇಲೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಂಪತಿಯ ಅಂತಿಮ ಸಂಸ್ಕಾರ ಇಂದು ನಡೆಯಲಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!