Sunday, May 19, 2024
spot_imgspot_img
spot_imgspot_img

ವಿಟ್ಲ: ಅಪ್ರಾಪ್ತ ಬಾಲಕಿಯ ಆತ್ಮಹತ್ಯೆಗೆ ನ್ಯಾಯ ದೊರಕಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಕನ್ಯಾನದಲ್ಲಿ ಪ್ರತಿಭಟನೆ; ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ: ಒಡಿಯೂರು ಶ್ರೀ

- Advertisement -G L Acharya panikkar
- Advertisement -

ವಿಟ್ಲ : ನಾವೊಂದು ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ. ಇದು ಶಾಂತಿಯುತವಾದ ಒಂದು ಹೋರಾಟವಾಗಿದೆ. ನಮಗೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ಭಾರತ ದೇಶ ಅನ್ನುವಂತದ್ದು ವಿಶಾಲವಾಗಿರುವಂತದ್ದು, ನಮ್ಮ ಧರ್ಮದ ಅನುಷ್ಠಾನಕ್ಕಿರುವ ಎಲ್ಲಾ ವಿಚಾರಗಳು ಇದರೊಳಗಿದೆ. ಧರ್ಮಕ್ಕೆ ಅನ್ಯಾಯವಾದಾಗ ಎದ್ದು ನಿಲ್ಲಬೇಕಾದ್ದು ಸ್ವಾಭಾವಿಕವಾಗಿ ಸತ್ಯವಾಗಿದೆ. ಇವತ್ತು ನಮ್ಮ ಪಕ್ಕದಲ್ಲೇ ಇರುವ ಅಪ್ರಾಪ್ತ ಬಾಲಕಿ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿರುವುದಾಗಿ ಕಂಡರೂ ಅದರ ಹಿಂದೆ ಇರುವ ಬೇರೆ ಬೇರೆ ವಿಚಾರವನ್ನು ಗಮನಿಸಿದಾಗ ಇದರಲ್ಲಿ ಏನೋ ಒಂದು ರೀತಿಯ ವಶೀಕರಣ ಇನ್ನಿತ್ಯಾದಿಗಳು ನಡೆದಿವೆ. ವಾಮಮಾರ್ಗವನ್ನು ಬಳಸುವುದು ಅಷ್ಟೊಂದು ಹಿತಕರವಲ್ಲ. ವಾಮಾಚಾರ ಸಮಾಜದಲ್ಲಿ ಆರೋಗ್ಯವನ್ನು ಕೆಡಿಸುವ ಕೃತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರಿನಲ್ಲಿ ನಡೆದ 14 ವರ್ಷದ ಬಾಲಕಿ ಆತ್ಮಿಕಾಳ ಸಾವಿಗೆ ನ್ಯಾಯ ಸಿಗಬೇಕು ವಿವಿಧ ಬೇಡಿಕೆಗಳನ್ನಈಡೇರಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕರಾವಳಿಯಾದ್ಯಂತ ಮೇ 9ರಂದು ಪ್ರ ತಿಭಟನೆಗೆ ಕರೆ ನೀಡಿದ್ದು, ಬೆಳಗ್ಗೆ ಕನ್ಯಾನ ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮುಗ್ದ ಮನಸ್ಸುಗಳಿಗೆ ನೋವು ಕೊಡಬಾರದು. ನಮ್ಮ ಹಿಂದೂಗಳಲ್ಲಿ ಇರುವಂತದ್ದು ಸರಳತನ, ತಾಳ್ಮೆ ಮತ್ತು ಸಹನೆ. ಅದನ್ನು ಕೆಣಕಲು ಹೋಗಬಾರದು. ಒಂದು ವೇಳೆಕೆಣಕಿದರೆ ಅದು ಬೆಂಕಿಯಾಗಿ ಹೊರಬರುತ್ತದೆ. ಇದು ಹೊಸ ಘಟನೆಯಲ್ಲ . ಇದರ ಬಗ್ಗೆ ಹೋರಾಟ ಮಾಡಬೇಕಾದ ಅನಿವಾರ್ಯ ಘಟ್ಟದಲ್ಲಿ ನಾವಿದ್ದೇವೆ. ಘಟನೆಯನ್ನು ಕೂಲಂಕುಶವಾಗಿ ತನಿಖೆ ನಡೆಸಿ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ. ಈ ಪ್ರತಿಭಟನೆ ಕೇವಲ ಆರಂಭವಷ್ಟೆ . ಈ ಲವ್ ಜಿಹಾದ್ ನಂತಹ ಕೃತ್ಯವನ್ನು ತಡೆಯುವ ಕೆಲಸವಾಗಬೇಕು. ಧರ್ಮದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಇದರ ಬಗ್ಗೆ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ.ಬಡತನವನ್ನು ಬಳಸಿಕೊಳ್ಳುವುದು ಒಳ್ಳೆಯದಲ್ಲ . ನಾವೆಲ್ಲ ಜಾಗೃತರಾಗಬೇಕು ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡುವ ಕಾಯಕದಲ್ಲಿ ನಾವೆಲ್ಲ ಕೈಜೋಡಿಸಬೇಕು. ಯುವಶಕ್ತಿ ಹಾಗೂ ತಾಯಂದಿರು ಎದ್ದು ನಿಂತಾಗ ಇಂತಹ ಕೃತ್ಯವನ್ನು ಧಮನಿಸಬಹುದು. ನ್ಯಾಯ ಮರಿಚಿಕೆಯಾದರೆ ತೀವ್ರ ತರಹದ ಹೋರಾಟಕ್ಕೆ ಮುಂದಡಿ ಇಡಬೇಕಾದೀತು ಎಂದರು.

ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿ ಹಳ್ಳಿ ಹಳ್ಳಿಗಳಲ್ಲಿ ಇಂತಹ ಮುಗ್ದ ಮನಸ್ಸುಗಳನ್ನು ಮುಚ್ಚಿಡಿಯುವಂತಹ ಮತ್ತು ಮರ್ಯಾದಿಗೆ ಹೆದರಿ ಬದುಕುತ್ತಿರುವ ಜನಸಾಮಾನ್ಯರ ಬದುಕಿನಲ್ಲಿ ಲವ್ ಜಿಹಾದ್ ಇವತ್ತು ವ್ಯಾಪಿಸುತ್ತಿದೆ. ಅದರೊಂದಿಗೆ ಡ್ರ ಗ್ಸ್ ಮಾಫಿಯಾ ಜಾಲದೊಂದಿಗೆ ಈ ಎಲ್ಲಾ ವಾಮಾಚಾರದಿಂದಾಗಿ ಮುಗ್ದ ಹೆಣ್ಣು ಮಕ್ಕಳನ್ನ ಸಜ್ಜನರನ್ನು ಪೀಡಿಸತಕ್ಕಂತ ಕೆಲಸ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ಕನ್ಯಾನದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಸಾವು ಇಡೀ ಹಿಂದೂ ಸಮಾಜಕ್ಕೆ ನೋವು ತಂದಿದೆ. ಹಿಂದೂ ಸಮಾಜದಲ್ಲಿ ನ್ಯಾಯಯುತವಾದ ಬದುಕನ್ನ ಈ ದೇಶದಲ್ಲಿ ನಡೆಸಿಕೊಳ್ಳಬೇಕು. ಇಂತಹ ಮುಗ್ದ ಜೀವಗಳನ್ನು ಬಲಿತೆಗೆದುಕೊಳ್ಳುವ ಲವ್ ಜಿಹಾದಿನಿಂದ ನಾವೆಲ್ಲರೂ ಸಂಘಟಿತರಾಗುವುದು ಮಾತ್ರವಲ್ಲ ಅಂತಹ ಮತೀಯವಾದಗಳನ್ನು ದೇಶದಲ್ಲಿ ಸೃಷ್ಠಿಸುವ ಮತ್ತು ಹಿಂದೂ ಸಮಾಜಕ್ಕೆ ಆಘಾತಕಾರಿ ಪರಿಣಾಮಗಳನ್ನ ನೀಡುವ ದುಷ್ಟಶಕ್ತಿಗಳನ್ನ ನಿಗ್ರಹಿಸಲು ಇಡೀ ಹಿಂದೂಸಮಾಜ ಒಗ್ಗಟ್ಟಾಗಬೇಕು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ಇಂತಹ ದುಷ್ಟಶಕ್ತಿಗಳನ್ನ ವಿರೋಧಿಸಿ ಸಮಾಜದ ಬೇರೆ ಬೇರೆ ಕಡೆಗಳಲ್ಲಿಆಗವಂತಹ ನೀಚ ಪ್ರವೃತ್ತಿಯನ್ನು ಸದೆ ಬಡಿಯಬೇಕಾಗದ ಅವಶ್ಯಕತೆ ಬಹಳಷ್ಠಿದೆ. ಇಂತಹ ಪರಿಸ್ಥಿತಿ ಎಲ್ಲಿಯೂ ಬರಬಾರದೂ. ಮುಂದೆ ಈ ಮಗುವಿಗೆ ನ್ಯಾಯ ಸಿಗದಿದ್ದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಉತ್ತಮವಾದ ಜಾಗೃತಿಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ನಮಗಿದೆ. ಮುಂದೆ ಈ ದೇಶದ ಉದ್ದಗಲದಲ್ಲಿ ಈ ಲವ್ ಜಿಹಾದಿನ ವಿರುದ್ದ ಸೆಟೆದು ನಿಲ್ಲಲು ನಾವೆಲ್ಲರೂ ಸಿದ್ದರಾಗಬೇಕು ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಮಾತನಾಡಿ ವಾಮಾಚಾರ ಎಂಬುದು ಆ ಬಾಲಕಿಯ ಮೇಲೆ ನಡೆದಿರುವುದು ನಿಜವಾಗಿದೆ. ನಮ್ಮ ಹತ್ತಿರ ಇಂತಹ ಕೃತ್ಯಗಳು ಆದಾಗ ನಾವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇಂತಹ ಘಟನೆಗಳು ನಡೆಯುವುದಕ್ಕಿಂತ ಮೊದಲೇ ನಾವು ಜಾಗೃತರಾಗಬೇಕಿದೆ. ಅತಿಯಾಗಿ ನಯವಿನಯದಲ್ಲಿ ಮಾತನಾಡುವವನಲ್ಲಿ ದೂರ್ತ ಲಕ್ಷಣವಿರುತ್ತದೆ. ಭಾರತ ಭೂಮಿಯಲ್ಲಿ ಹುಟ್ಟಿದ ವಿಕೃತವಾದ ವಿಷಬೀಜಗಳು ನಾಶವಾಗಬೇಕು. ಹಿಂದೂ ಸಂಘಟನೆಯ ಇಂತಹ ಕಾರ್ಯ ಶ್ಲಾಘನೀಯ. ಇಂತಹ ವಿಚಾರಗಳು ಬಂದಾಗ ನಾವು ಸಂಘಟಿತರಾಗಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ ಯಾವ ತಂದೆ-ತಾಯಿಗೂ ಇಂತಹ ದುರ್ದೈವ ಬರಬಾರದು. ಪ್ರೀತಿಯೆಂಬ ನಾಟಕ, ವಶೀಕರಣಕ್ಕೋಸ್ಕರ ವಾಮಾಚಾರ, ಪ್ರತಿದಿನ ಮನೆಗೆ ಬಂದು ಪ್ರೀತಿಸುವಂತೆ ಒತ್ತಡ ಈ ಷಡ್ಯಂತರಕ್ಕೆ ಓರ್ವ ಹೆಣ್ಣು ಮಗಳು ಬಲಿಯಾದಳು. ನಾವು ಕಳೆದ ಹಲವಾರು ವರುಷಗಳಿಂದ ಹೇಳುತ್ತಿರುವ ಲವ್ ಜಿಹಾದ್ ಎಂದರೆ ಇದೇ. ಈ ದೇಶವನ್ನು ಮುಸ್ಲೀಮರು ಇಸ್ಲಾಮಿಕರಣ ಮಾಡಬೇಕು. ಈ ದೇಶವನ್ನು ಇಸ್ಲಾಮಿನ ಮುಖಾಂತರ ಮತಾಂತರ ಮಾಡಬೇಕೆಂದಿರುವ ಕಳೆದ ಹಲವಾರು ವರುಷಗಳ ಷಡ್ಯಂತ್ರವೇ ಲವ್ ಜಿಹಾದ್, ಅದೇ ಲ್ಯಾಂಡ್ ಜಿಹಾದ್, ಅದೇ ಭಯೋತ್ಪಾದನೆ. ಇದೀಗ ಲವ್ ಜಿಹಾದ್ ಗೆ ಓರ್ವ ಹಿಂದೂ ಹೆಣ್ಣು ಮಗಳು ಬಲಿಯಾಗಿದ್ದಾಳೆ. ನ್ಯಾಯಕ್ಕಾ ಗಿ ಇದೀಗ ಹಿಂದೂ ಸಂಘಟನೆಗಳು ಪ್ರ ತಿಭಟನೆಗೆ ಹೆಜ್ಜೆ ಇಟ್ಟಿದೆ. ನಮಗೆ ಮುಸ್ಲಿಂಮರ ಇಂತಹ ವರ್ತನೆ ಸಂಶಯಕ್ಕೆ ಕಾರಣವಾಗುತ್ತಿದೆ. ಹದಿನಾಲ್ಕು ವರುಷದ ಹೆಣ್ಣು ಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಆದ ಅನ್ಯಾಯಕ್ಕೆ ನೀವು ಹೋರಾಟ ಮಾಡಬೇಕಿತ್ತು. ಆದರೆ ನೀವ್ಯಾರು ಪ್ರತಿಭಟನೆಗೆ ಬಂದಿಲ್ಲ ಅದಕ್ಕಾಗಿಯೇ ನಾವಿಲ್ಲಿ ನಿಮ್ಮ ಬಗ್ಗೆ ಮಾತನಾಡೋದು. ನಮ್ಮ ಸಮಾಜಕ್ಕೆ ನೀವುಗಳು ದ್ರೋಹ ಬಗೆಯುತ್ತಾ ಇದ್ದೀರ. ಒಬ್ಬನೇ ಒಬ್ಬ ಮುಸ್ಲೀಂ ಆ ಬಾಲಕಿಗೆ ಅನ್ಯಾಯವಾಗಿದೆ. ಆ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಹೇಳಿಕೆ ಕೊಡಿ ನೋಡೋಣ. ಯಾರಾದರೂ ಈ ಬಗ್ಗೆ ಮಾತನಾಡಿದ್ದಾರ. ಮುಸ್ಲೀಂ ಸಮುದಾಯ ಹಾಗೂ ಧರ್ಮಗುರುಗಳು ಇಂತಹ ಕೃತ್ಯಕ್ಕೆ ಕುಮ್ಮಕ್ಕು ಕೊಡ್ತಾ ಇದ್ದೀರಿ ಎನ್ನುವ ಬಲವಾದ ಸಂಶಯ ವ್ಯಕ್ತವಾಗುತ್ತಿದೆ. ದಲಿತ ಸಂಘಟನೆಗಳ ಮೌನ ನಮಗೆ ಆಶ್ಚರ್ಯವಾಗುತ್ತಿದೆ. ಕನ್ಯಾನದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿರುವ ಯುವತಿಯ ಸಾವಾದಾಗ ನೀವೆಲ್ಲ ಯಾಕೆ ಧ್ವನಿ ಎತ್ತುತ್ತಿಲ್ಲ.

ನಿಮ್ಮ ಇಬ್ಬಗೆ ನೀತಿಯಿಂದಾಗಿ ನಿಮ್ಮನ್ನು ಮುಸಲ್ಮಾನರು ಉಪಯೋಗಿಸುತ್ತಿದ್ದಾರೆ. ನಾವು ದಲಿತ ವಿರೋದಿಗಳಲ್ಲ. ನಿಮ್ಮ ಮೇಲೆ ಗೌರವ, ವಿಶ್ವಾ ಸ ಇದೆ. ನಮಗೆ ಯಾವುದೇ ಭೇದ ಭಾವವಿಲ್ಲ. ಹೋರಾಟಕ್ಕೆ ಇಳಿಯಿರಿ ಆ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಿಕೊಡಿ. ಇನ್ನೊಂದೆಡೆ ಈ ಅಪ್ರಾಪ್ತ ಬಾಲಕಿಯ ಸಾವಿನ ವಿಚಾರದಲ್ಲಿ ಕಾಂಗ್ರೆಸ್ ಮೌನವಹಿಸಿದೆ. ಈ ಘಟನೆಯ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಇದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಎಲ್ಲಾ ಮತೀಯ ಮುಖ್ಯಸ್ಥರಿಗೆ ಹೇಳಲು ಬಯಸುತ್ತೇನೆ ನಿಮ್ಮ ಯುವಕರಿಗೆ ಬುದ್ದಿವಾದ ಹೇಳಿ. ನಮ್ಮವರ ತಂಟೆಗೆ ಬರಲು ಬಿಡಬೇಡಿ. ನಿಮ್ಮ ಹೆಣ್ಣುಮಕ್ಕಳಿಗೆ ತೊಂದರೆಯಾಗುವುದಕ್ಕೆ ಹಿಜಾಬ್ ಬೇಕು. ಆದರೆ ನಮ್ಮ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವುದು ಎಷ್ಟು ಸರಿ. ನಿಮ್ಮ ಯುವಕರನ್ನು ನೀವು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ನೀವುಗಳು ಮಾಡಿ ಇಲ್ಲವಾದಲ್ಲಿ ನಮ್ಮ ಯುವಪಡೆ ಅದಕ್ಕೆ ತಕ್ಕಶಾಸ್ತಿ ಮಾಡಲಿದೆ. ನಾವೆಲ್ಲರೂ ಒಂದಾಗಿ ಆ ಮನೆಗೆ ಸಹಕಾರ ನೀಡೋಣ. ಆ ಕುಟುಂಬಕ್ಕೆ ನಾವು ಆಸರೆಯಾಗೋಣ. ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನ ಹೋರಾಟವನ್ನು ಇನ್ನಷ್ಟು ಹೆಚ್ಚು ಮಾಡೋಣ. ಮುಂದೆ ನಮ್ಮ ಈ ಗ್ರಾಮದಲ್ಲಿ ಈ ಲವ್ ಜಿಹಾದ್ ಗೆ ಯಾವುದೇ ಹೆಣ್ಣುಮಕ್ಕಳು ಬಲಿಯಾಗಬಾರದು ಎಂದು ಸಂಕಲ್ಪ ಮಾಡೋಣ. ಈ ನಮ್ಮ ಕೂಗು ಸರಕಾರಕ್ಕೆ ಕೇಳಬೇಕು. ಲವ್ ಜಿಹಾದ್ ಮಾಡುವ ಯುವಕರಿಗೆ ಇದೊಂದು ಕರೆಘಂಟೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ವಿಶ್ವ ಹಿಂದೂ ಪರಿಷತ್ ವಿಟ್ಲ ಅಧ್ಯಕ್ಷ ಪದ್ಮನಾಭ ಕಟ್ಟೆ , ವಿಟ್ಲ ಬಜರಂಗ ದಳದ ಸಂಚಾಲಕ ಚಂದ್ರಹಾಸ ಕನ್ಯಾನ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋವರ್ಧನ್, ವಿಶ್ವ ಹಿಂದೂ ಪರಿಷತ್ ನ ಕನ್ಯಾನ ಘಟಕದ ಅಧ್ಯಕ್ಷ ಲೊಕೇಶ್ ಗೌಡ ಕನ್ಯಾನ, ಭಜರಂಗದಳ ಸಂಚಾಲಕ ಕೃಷ್ಣಪ್ಪ ಗೌಡ ಪಣೆಯಡ್ಕ , ವಿಶ್ವ ಹಿಂದೂ ಪರಿಷತ್ ನ ಕನ್ಯಾನ ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಹೆಚ್, ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರ್, ಲೋಹಿತ್ ಪನೋಲಿಬೈಲ್, ಪುನೀತ್ ಮಾಡ್ತಾರ್ ಸೇರಿದಂತೆ ಹಲವು ಸಂಘಟನಾ ಪ್ರಮುಖರು, ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!