Thursday, April 25, 2024
spot_imgspot_img
spot_imgspot_img

ವಿಟ್ಲ: ಅಳಕೆ ಮಜಲು ಶಾಲೆಯ ಬೆಳ್ಳಿಹಬ್ಬದ ಪ್ರಯುಕ್ತ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮ್ಯಾಟ್‌ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಳಕೆಮಜಲು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಳೆ ವಿದ್ಯಾರ್ಥಿ ಸಂಘ ಅಳಕೆ ಮಜಲು ಇದರ ವತಿಯಿಂದ 19 ವರ್ಷದ ಒಳಗಿನ ಕಾಲೇಜ್ ವಿದ್ಯಾರ್ಥಿಗಳ ಮ್ಯಾಟ್ ಅಂಕಣದ ಕಬ್ಬಡಿ ಪಂದ್ಯಾಟವು ಅಳಕೆಮಜಲು ಶಾಲಾ ವಠಾರದಲ್ಲಿ ನಡೆಯಿತು.

ಉದ್ಘಾಟನಾ ಕಾರ್ಯಕ್ರಮವನ್ನು ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು, ಅನೀಫ್ ಬಗ್ಗುಮೂಲೆ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜರಾಮ್ ಶೆಟ್ಟಿ ಕೋಲ್ಪೆ ಗುತ್ತು, ಮುಖ್ಯ ಅತಿಥಿಯಾಗಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಮುರಳಿ ನಿಡ್ಯ, ಜಗದೀಶ್ ಪೂಜಾರಿ ಅಳಕೆಮಜಲು, ಸಂಜೀವ ಗೌಡ ಪೆಲತ್ತಿಂಜ, ಸಾಕೀರ್ ಅಳಕೆಮಜಲು, ಕೃಷ್ಣ ಕಿಶೋರ್ ಪೆಲತ್ತಿಂಜ, ಇಸ್ಮಾಯಿಲ್ ಅಧ್ಯಾಪಕರು ಉಪಸ್ಥಿತಿ ಇದ್ದರು. ಹಿರಿಯ ವಿದ್ಯಾರ್ಥಿ ಸಂಘದ ದೀಕ್ಷಿತ್ ಮತ್ತು ಹಳೆ ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ವಿದ್ಯಾರ್ಥಿಗಳು ಸೇರಿದ್ದರು.

ಹಿರಿಯರು ಆಗಿರುವ, ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ತಿಮ್ಮಪ್ಪ ಸಪಲ್ಯ ದೇವಸ್ಯ ಮತ್ತು ನಿವೃತ್ತ ಅಧ್ಯಾಪಕ ರಮೇಶ್ ಬಾಯಾರ್ ಇವರನ್ನು ಕಬ್ಬಡಿ ಪಂದ್ಯಾಟದ ಸಂದರ್ಭದಲ್ಲಿ ಗೌರವಿಸಲಾಯಿತು.

ಪಂದ್ಯಾಟದ ತೀರ್ಪುಗಾರರಾಗಿ ಅಭಿಬ್ ಮಾಣಿ, ಪುರುಷೋತ್ತಮ ಕೋಲ್ಪೆ, ಸುಧೀರ್ ಪೆರುವಾಯಿ, ಅರವಿಂದ ವಿಟ್ಲ, ಸಿದ್ದಿಕ್ ಕುಕ್ಕಾಜೆ ಆಗಮಿಸಿ ಉತ್ತಮವಾಗಿ ನಿರ್ವಹಿಸಿದರು.

ಕಬ್ಬಡಿ ಪಂದ್ಯಾಟದ ಬಹುಮಾನವನ್ನು ಯೋಗೀಶ್ ನಾಯ್ಕ್ ಹಳೆ ವಿದ್ಯಾರ್ಥಿಗಳು, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು, ಟ್ರೋಪಿಗಳ ಕೊಡುಗೆಯನ್ನು ಕಿರಣ್ ರಾಜ್, ಹಿರಿಯ ವಿದ್ಯಾರ್ಥಿ, ಮ್ಯಾಟ್ ಕೊಡುಗೆಯನ್ನು ಮುರಳಿ ನಿಡ್ಯಾ, ಕ್ರೀಡಾಂಗಣವನ್ನು ಕಿಶನ್ ಅಳಕೆಜಲು ನೀಡಿದರು.

ಈ ಕ್ರೀಡಾಕೂಟದಲ್ಲಿ ಸುಮಾರು 46 ತಂಡಗಳು ಭಾಗವಹಿಸಿದ್ದು ಕೂಟದ ಪ್ರಥಮ ಪ್ರಶಸ್ತಿಯನ್ನು ಅಜಾದ್ ಕೀನ್ಯಾ, ದ್ವಿತೀಯ ಸ್ಥಾನವನ್ನು ಜಿಎಫ್ ಸಿ ಪಂಜಿ ಕಲ್ಲು, ತೃತೀಯ ಮತ್ತು ಚತುರ್ಥ ಬಹುಮಾನವನ್ನು ಶಕ್ತಿ ಕಾಲೇಜು, ಮಂಗಳೂರು ಪಡೆದುಕೊಂಡಿದೆ.

ಕಾರ್ಯಕ್ರಮದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧೀರ್ ಸ್ವಾಗತಿಸಿ, ಬಾತೀಸ್ ಅಳಕೆಮಜಲು ಧನ್ಯವಾದಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಉದಯ್ ಕುಲಾಲ್ ನೆರವೇರಿಸಿದರು. ಕ್ರೀಡಾಕೂಟದ ನಿರೂಪಣೆಯನ್ನು ಮನ್ಮಥ ಶೆಟ್ಟಿ ಪುತ್ತೂರು ನೆರವೇರಿಸಿದರು.

vtv vitla
- Advertisement -

Related news

error: Content is protected !!