Monday, April 29, 2024
spot_imgspot_img
spot_imgspot_img

ವಿಟ್ಲ: ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣ; ಮೂವರ ವಿರುದ್ದ ಪ್ರಕರಣ ದಾಖಲು; ಹಳೆ ವೈಷಮ್ಯ ಮುಳುವಾಯಿತೇ..?

- Advertisement -G L Acharya panikkar
- Advertisement -

ವಿಟ್ಲ: ತಡರಾತ್ರಿ ಕಬಡ್ಡಿ ಮ್ಯಾಚ್‌ ಮುಗಿಸಿ ಹಿಂದಿರುತ್ತಿದ್ದ ಆಟೋ ಚಾಲಕನನ್ನು ಬೋಳಂತೂರು ಸಮೀಪ ನಾಡಾಜೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹಳೆಯ ವೈಷಮ್ಯವೇ ಈ ಕೃತ್ಯಕ್ಕೆ ಕಾರಣ.

ಬೋಳಂತೂರು ಗ್ರಾಮದ ನಾಡಾಜೆ ನಿವಾಸಿ, ಆಟೋ ಚಾಲಕ ಶಾಕಿರ್ ಹಲ್ಲೆಗೊಳಗಾದ ಯುವಕ. ಸಾಧಿಕ್ ಯಾನೆ ಕುಂಡ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.

ಶಾಕಿರ್‌‌ ರಾತ್ರಿ ರಿಕ್ಷಾದಲ್ಲಿ ಸ್ನೇಹಿತರಾದ ಆರೀಸ್ ಶಕೀರ್‌,‌ ಕಲ್ಪನೆ ಮತ್ತು ಬೈಲ್ ಮುರರೊಂದಿಗೆ ಪುಂಜಾಲಕಟ್ಟೆಯಲ್ಲಿ ನಡೆದ ಕಬಡ್ಡಿ ಮ್ಯಾಚ್ ಮುಗಿಸಿ ಕೊಕ್ಕಪುಣಿ ಎಂಬಲ್ಲಿ ಗೆಳಯರನ್ನು ಇಳಿಸಿ ತನ್ನ ಮನೆಯಾದ ನಾಡಾಜೆ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೋಳಂತೂರು ಗ್ರಾಮದ ಮದಕ ಎಂಬಲ್ಲಿ ತಲುಪಿದಾಗ ಮೂರು ಜನ ನಿಂತಿದ್ದು ಅವರಲ್ಲಿ ಒರ್ವ ರಿಕ್ಷಾದ ಗ್ಲಾಸ್‌ಗೆ ಟಾರ್ಚ್ ಲೈಟ್ ಬೆಳಕು ಹಾಯಿಸಿದ್ದು ಆದರಿಂದಾಗಿ ರಿಕ್ಷಾವನ್ನು ನಿಧಾನಿಸಿ ಮುಂದೆ ಹೋದಾಗ ಮೂರು ಜನ ಸೇರಿ ರಿಕ್ಷಾವನ್ನು ಅಡಗಟ್ಟಿ ನಿಲ್ಲಿಸಿದ್ದರು. ಆ ಮೂವರಲ್ಲಿ ಓರ್ವ ಪರಿಚಯದ ಸಾಧಿಕ್ ಯಾನೆ ಕುಂಡ ಎಂಬವನು ನನ್ನ ಮೇಲೆ ನೀನು ಹಾಗೂ ನಿನ್ನ ಅಣ್ಣ ಸೇರಿಕೊಂಡು ಕೇಸು ಮಾಡಿದ್ದೀರ ಸುಮಾರು ಸಮಯದಿಂದ ನೀನು ಒಬ್ಬನೇ ಸಿಗುವುದನ್ನು ಕಾಯುತ್ತಿದ್ದು ಇವತ್ತು ಸಿಕ್ಕಿದ್ದೀಯಾ, ನಿನ್ನನ್ನು ಒಂದು ಕೈ ನೋಡುತ್ತೇನೆ ಎಂದು ಹೇಳಿ ತಲವಾರು ರೀತಿಯ ಆಯಧವನ್ನು ತೋರಿಸಿ ಅದರಿಂದ ಕಡಿದಿದ್ದಾನೆ ನಾಲ್ಕು ವರ್ಷದ ಹಿಂದೆ ಶಾಕೀ‌ರ್‌ ದೊಡ್ಡಪ್ಪನ ಮಗ ರಫೀಕ್ ನಿಗೂ ಆರೋಪಿ ಸಾಧಿಕನಿಗೂ ಆದ ಗಲಾಟೆಯ ವಿಚಾರದಲ್ಲಿ ಶಾಕೀರ್ ರಫೀಕ್‍ನ ಪರವಾಗಿ ನಿಂತ ವಿಚಾರದಲ್ಲಿ ಈ ಕೃತ್ಯ ನಡೆದಿದೆ.

- Advertisement -

Related news

error: Content is protected !!