Saturday, May 18, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ (ನಿ.) ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇಡ್ಕಿದು ಇವರ ವತಿಯಿಂದ, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇವರ ಸಹಯೋಗದಲ್ಲಿ “ಉದ್ಯೋಗ ನೈಪುಣ್ಯ ತರಬೇತಿ ಶಿಬಿರ”

- Advertisement -G L Acharya panikkar
- Advertisement -

ವಿಟ್ಲ: ಗ್ರಾಮೀಣ ಭಾಗದ ಜನತೆಯನ್ನು ಸ್ವಾವಲಂಬಿ ಮತ್ತು ಆರ್ಥಿಕವಾಗಿ ಸದೃಢಗೊಳಿಸುವ ಮೂಲಕ ಗ್ರಾಮಾಭಿವೃದ್ಧಿ, ಯುವಕರನ್ನು ಸದೃಢಗೊಳಿಸುವಲ್ಲಿ ತನ್ನದೇ ಆದ ಬಾಷ್ಯ ಬರೆದಿದೆ ಇಡ್ಕಿದು ಸೇವಾ ಸಹಕಾರಿ ಸಂಘ. ಇದರ ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇಡ್ಕಿದು ಇವರ ವತಿಯಿಂದ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರು ಇವರ ಸಹಯೋಗದಲ್ಲಿ ಉರಿಮಜಲಿನ ಶತಾಮೃತ ಸಂಕೀರ್ಣದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ನಡೆಯುತ್ತಿದೆ.

ಮೇ.26 ರಿಂದ ಪ್ರಾರಂಭಗೊಂಡು ಮೇ.31 ರವರೆಗೆ ಯುವ ಜನತೆಯನ್ನು ಸದೃಢಗೊಳಿಸಲು ವಿವಿಧ ವಿಷಯಗಳಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಗಾರದಲ್ಲಿ ಜೇನು ಕೃಷಿ, ವಿದ್ಯುತ್ ಉಪಕರಣಗಳ ದುರಸ್ತಿ, ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ಬಳಕೆ, ಫ್ಯಾಷನ್ ಡಿಸೈನಿಂಗ್, ಮೊಬೈಲ್, ಸಿ.ಸಿ ಕ್ಯಾಮರಾ ರಿಪೇರಿ

ಸಣ್ಣ ಉದ್ಯಮ, ಗುಡಿ ಕೈಗಾರಿಕೆ, ಫುಡ್ ಟೆಕ್ನಾಲಜಿ, ಆಹಾರ ಮೌಲ್ಯವರ್ಧನೆ, ಮುದ್ರಾ ಯೋಜನೆಯ ಮೂಲಕ ಸ್ವ-ಉದ್ಯೋಗಕ್ಕೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲಾಯಿತು. ಈ ಉದ್ಯೋಗ ನೈಪುಣ್ಯ ತರಬೇತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳ ಅಭ್ಯರ್ಥಿಗಳು ಭಾಗಿಯಾಗಿ ತರಬೇತಿ ಪಡೆದುಕೊಂಡಿದ್ದಾರೆ. ತಾವು ಸಹ ಸ್ವುದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದ ಯುವಜನತೆಯನ್ನು ಸದೃಢಗೊಳಿಸಿ, ಸುಂದರ ಬದುಕು ಕಟ್ಟಿಕೊಳ್ಳಲು ಸದಾ ಪ್ರೇರಣೆ ಹಾಗೂ ಅವಕಾಶ ನೀಡುತ್ತಿರುವ ಇಡ್ಕಿದು ಸೇವಾ ಸಹಕಾರಿ ಸಂಘ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ಕಾರ್ಯ ಎಲ್ಲರೂ ಮೆಚ್ಚುವಂತದ್ದು. ಈ ಸೇವೆ ಮುಂದೆಯೂ ಹೀಗೆ ಸಾಗಲಿ ಎಂಬುವುದು ನಮ್ಮ ಆಶಯ.

- Advertisement -

Related news

error: Content is protected !!