Saturday, May 18, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಇದರ 2022-2023ನೇ ಸಾಲಿನ ವಾರ್ಷಿಕ ಮಹಾಸಭೆ; 476ಕೋಟಿ ರೂ. ವ್ಯವಹಾರ, 1.36ಕೋಟಿ ರೂ. ನಿವ್ವಳ ಲಾಭ

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ನಂ.3628 ಇಲ್ಲಿನ ವಾರ್ಷಿಕ ಮಹಾಸಭೆಯು ಸಂಘದ ಕೇಂದ್ರ ಕಛೇರಿ ಶತಾಮೃತದಲ್ಲಿ ನಡೆಯಿತು. ಇಡ್ಕಿದು ಸೇವಾ ಸಹಕಾರಿ ಸಂಘ (ನಿ) ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.

ಈ ಸಭೆಯಲ್ಲಿ 2022-23ನೇ ಸಾಲಿನ ವಾರ್ಷಿಕ ವರದಿ ಮಂಡನೆ, ಅಂದಾಜು ಆಯವ್ಯಯ ಪಟ್ಟಿ, ಲೆಕ್ಕ ಪರಿಶೋಧನೆ, ಲಾಭಾಂಶ ಹಂಚಿಕೆ, ಲೆಕ್ಕ ಪರಿಶೋಧಕರ ಆಯ್ಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಿತು.

2022-23ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯನ್ನು ಮೂಡಬಿದ್ರೆಯ ಕೊ-ಚಾರ್ಟರ್ಡ್ ಅಕೌಂಟೆಂಡ್‌ ಎಂ. ಉಮೇಶ್‌ ರಾವ್‌ ಮಾಡಿದರು. ಸಂಘವು 2022-23ನೇ ಸಾಲಿನಲ್ಲಿ 12% ಡೆವಿಡೆಂಟ್ ಘೋಷಿಸಲಾಯಿತು. ಸಂಘವು 476ಕೋಟಿ ವ್ಯವಹಾರ ಮಾಡಿ ನಿವ್ವಳ ಲಾಭ ರೂ.1,36,12,999.86 ಗಳಿಸಿದ್ದು, “ಅ” ತರಗತಿಯಲ್ಲಿ ವರ್ಗಿಕರಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ 10 ಜನ ಹಿರಿಯ ಸದಸ್ಯರಿಗೆ ಹಾಗೂ 8ಜನ ಹಿರಿಯ ಶ್ರಮ ಜೀವಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಅಂತಿಮ ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ (ಶೇ.85)ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಸೈನಿಕ ಪ್ರವೀಣ್ ನಾಯ್ತೋಟ್ಟು, ತುಳು ಲಿಪಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಧನ್ಯಶ್ರೀ ಹಾಗೂ ಸಾಹಿತಿ ವಿಶ್ವನಾಥ ಕುಲಾಲ್ ಮಿತ್ತೂರು ಇವರನ್ನು ಗೌರವಿಸಲಾಯಿತು. ಸಂಘದ ಮೃತ ಸದಸ್ಯರಿಗೆ ಶ್ರದ್ದಾಂಜಲಿ ಹಾಗೂ ಚಂದ್ರಯಾನ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘ ಉಪಾಧ್ಯಕ್ಷ ರಾಮ್‌ ಭಟ್‌ ನೀರಪಳಿಕೆ, ನಿರ್ದೇಶಕರಾದ ನಾರಾಯಣ ನೆರ್ಲಾಜೆ, ಪ್ರವೀಣ್‌ ಕೊಪ್ಪಲ, ಜಯಂತ ಡಿ ದರ್ಬೆ, ಸುಂದರ ಪಿ ಪಾಂಡೇಲು, ಶಿವಪ್ರಕಾಶ್‌ ಕೆ.ವಿ ಕೂವೆತ್ತಿಲ, ಜನಾರ್ದನ ಪೂಜಾರಿ ಕಾರ್ಯಾಡಿ, ವಸಂತ ಉರಿಮಜಲು, ಶೇಖರ ನಾಯ್ಕ ಅಳಕೆಮಜಲು, ನಳಿನಿ ಪೆಲತ್ತಿಂಜ, ವಿಜಯಲಕ್ಷ್ಮೀ ಪಿಲಿಪ್ಪೆ, ರತ್ನ ಸೇಕೆಹಿತ್ತಿಲು, ವೃತ್ತಿಪರ ನಿರ್ದೇಶಕರು ಗೋಪಾಲಕೃಷ್ಣ ಭಟ್‌ ಎಂ ಪಡೀಲ್‌ ಮೈಕೆ, ಮುಖ್ಯ ಕಾರ್ಯನಿರ್ವಣಾಧಿಕಾರಿ ಈಶ್ವರ ನಾಯ್ಕ ಎಸ್‌ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್ ವರದಿ ಮಂಡಿಸಿದರು. ಹರ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಬಿ.ಸುಧಾಕರ್‍ ಶೆಟ್ಟಿ ಬೀಡಿನಮಜಲು ಸ್ವಾಗತಿಸಿ, ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ ವಂದಿಸಿದರು. ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!