Monday, August 10, 2026
spot_imgspot_img
spot_imgspot_img

ವಿಟ್ಲ: ಎರಡು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ವಿಟ್ಲ: ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದ ಕೊಡಾಜೆಯಲ್ಲಿ ನಡೆದಿದೆ. ಮೊಹಮ್ಮದ್ ಅವರ ಪುತ್ರ ಅಬ್ದುಲ್ ನಝೀರ್(19) ಮೃತ ದುರ್ದೈವಿ.

ನಝೀರ್ ಇಂದು ಸಂಜೆ ಕೊಡಾಜೆಯ ಫ್ಲ್ಯಾಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ಬುಡೋಳಿ ನಿವಾಸಿ ಇವರು ಕೊಡಾಜೆಯಲ್ಲಿ ಕೆಲವು ಸಮಯದಿಂದ ವಾಸಿಸುತ್ತಿದ್ದರು. ಉಪ್ಪಳದಲ್ಲಿ ಕೆಲಸದಲ್ಲಿದ್ದ ಆತ ಎರಡು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದ. ಇಂದು ಮನೆಯಲ್ಲಿ ಎಲ್ಲರೂ ಇದ್ದರು, ಆದರೆ ಈತ ಮಾತ್ರ ಕೊಠಡಿಗೆ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮೃತ ದುರ್ದೈವಿ ಅಬ್ದುಲ್ ನಝೀರ್(19) .
- Advertisement -

Related news

error: Content is protected !!