Friday, March 29, 2024
spot_imgspot_img
spot_imgspot_img

ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಫಲಿತಾಂಶ

- Advertisement -G L Acharya panikkar
- Advertisement -

ವಿಟ್ಲ: ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ. ಗ್ರಾಮೀಣ ಪ್ರದೇಶದ ಮಕ್ಕಳನ್ನೊಳಗೊಂಡ ಈ ಶಾಲೆ ಹಳ್ಳಿ ಪ್ರದೇಶದಲ್ಲಿದೆ. ಪ್ರತೀ ವರ್ಷವೂ ಉತ್ತಮ ಫಲಿತಾಂಶದೊಂದಿಗೆ ದಾಖಲೆ ನಿರ್ಮಿಸುತ್ತಿರುವ ಈ ಶಾಲೆ ಈ ಬಾರಿಯೂ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ 100% ರಷ್ಟು ಫಲಿತಾಂಶ ತಂದುಕೊಟ್ಟಿದೆ.

ಮಾಜಿ ಸಚಿವ ನಾಗರಾಜ ಶೆಟ್ಟಿ ಶಾಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ವೇಣುಗೋಪಾಲ ಶೆಟ್ಟಿ ಸಂಚಾಲಕತ್ವದ ಈ ಶಾಲೆಯಲ್ಲಿ ವಾಣಿಶ್ರೀ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.

ನುರಿತ ಶಿಕ್ಷಕ ವರ್ಗವನ್ನೊಳಗೊಂಡ ಈ ಶಾಲೆಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

- Advertisement -

Related news

error: Content is protected !!