Saturday, April 20, 2024
spot_imgspot_img
spot_imgspot_img

ವಿಟ್ಲ: (ಒ.2ರಿಂದ 5)ವರೆಗೆ ಶ್ರೀ ದೇವತಾ ಸಮಿತಿ ವಿಟ್ಲ ಇದರ ವತಿಯಿಂದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ ವತಿಯಿಂದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವಿಟ್ಲದಸರಾ 2022 ಇದರ 51ನೇ ವರ್ಷದ ಕಾರ್ಯಕ್ರಮವು ವಿಟ್ಲದ ಶ್ರೀ ಅನಂತೇಶ್ವರ ದೇವಸ್ಥಾನದ ಅನಂತ‌ ಸದನದಲ್ಲಿ ದಿನಾಂಕ 02-10-2022ರಿಂದ 05-10-2022 ವರೆಗೆ ನಡೆಯಲಿದೆ.

02-10-2022ನೇ ಆದಿತ್ಯವಾರ ಬೆಳಿಗ್ಗೆ 7.00ರಿಂದ ಗಣಪತಿ ಹವನ, ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಶ್ರೀ ಮಾತೆಯ ವಿಗ್ರಹವನ್ನು ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯಿಂದ ಉತ್ಸವದ ಸ್ಥಳಕ್ಕೆ ಪ್ರತಿಷ್ಠಾ ವಿಧಿ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ತರುವುದು, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆಯನ್ನು ವೇದಮೂರ್ತಿ ಎಂ. ವಿಕಾಸ್ ಭಟ್, ಶ್ರೀರಾಮ ಮಂದಿರ ವಿಟ್ಲ ಇವರು, ಧ್ವಜಾರೋಹಣವನ್ನು ಎಂ. ರಾಧಾಕೃಷ್ಣ ನಾಯಕ್, ಅಧ್ಯಕ್ಷರು, ಶ್ರೀ ದೇವತಾ ಸಮಿತಿ ವಿಟ್ಲ ಇವರು ನೇರವೇರಿಸಲ್ಲಿದ್ದಾರೆ.

ಡಾ‌. ಕೆ ಪ್ರಭಾಕರ್ ಭಟ್, ಕಲ್ಲಡ್ಕ, ಅಧ್ಯಕ್ಷರು ವಿದ್ಯಾವರ್ಧಕ ಸಂಘ ಪುತ್ತೂರು ಇವರು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಇವರ ದಿವ್ಯ ಉಪಸ್ಥಿತಿಯಲ್ಲಿ, ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪ್ರಕಾಶ್ ನಾಯಕ್, ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ದರ್ಶನ್ ಜೈನ್, ಜೈನ ಬಸದಿ ವಿಟ್ಲ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಗಂಟೆ 1.00ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ಕ್ಕೆ ಭಜನಾಮೃತ ಜೈ ಜೈ ರಾಮಕೃಷ್ಣ ಹರಿ ತಂಡ, ಪಾಣೆಮಂಗಳೂರು ಇವರಿಂದ, ಸಂಜೆ 7.00ಕ್ಕೆ ಸುಗಮ ಸಂಗೀತ, ಪುತ್ತೂರು ನರಸಿಂಹ ನಾಯಕ್ ಮತ್ತು ಬಳಗ ಬೆಂಗಳೂರು ಇವರಿಂದ, ಭಕ್ತಿಗೀತೆ, ದಾಸ ಸಾಹಿತ್ಯಗಳ ಸಂಗೀತ ಕಾರ್ಯಕ್ರಮ, ರಾತ್ರಿ 9.30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 03-10-2022ರಂದು ಬೆಳಿಗ್ಗೆ 6.00ಕ್ಕೆ ಚಂಡಿಕಾ ಹವನ ಮತ್ತು ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಮಧ್ಯಾಹ್ನ 3.00ರಿಂದ ಸಂಗೀತ ಸ್ಫರ್ಧೆ, ವಂದೇ ಮಾತರಂ, ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ಗಾನ ಸಂಭ್ರಮ,ಪುತ್ತೂರು ಜಗದೀಶ್‌ ಆಚಾರ್ಯ ಮತ್ತು ಬಳಗದವರಿಂದ ನಡೆಯಲಿದೆ.

ದಿನಾಂಕ: 04-10-2022ರಂದು ಬೆಳಿಗ್ಗೆ ಭಜನೆ, ಪೂಜೆ, ಹೂಹಾರ ಸ್ಪರ್ಧೆ, ಗೀತ ಕಂಠ ಸ್ಪರ್ಧೆ, ಪ್ರಬಂಧ ಸ್ಫರ್ಧೆ ನಡೆಯಲಿದೆ. ಮಧ್ಯಾಹ್ನ 3.00ರಿಂದ ರಂಗ ವಲ್ಲಿ ಸ್ಪರ್ಧೆ, ದೀಪಾಲಂಕಾರ ಸೇವೆ, ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಭಜನ್‌ ಸಂಧ್ಯಾ ಯೋಗೀಶ್‌ ಕಿಣಿ ಮತ್ತು ಬಳಗ ಕಾರ್ಕಳ ಇವರಿಂದ ನಡೆಯಲಿದೆ.

ದಿನಾಂಕ: 05-10-2022ರಂದು ಬೆಳಿಗ್ಗೆ 7.00ರಿಂದ ಪ್ರಸನ್ನ ಪೂಜೆ, ಭಜನೆ, ಅಕ್ಷರ ಅಭ್ಯಾಸ, ಮಧ್ಯಾಹ್ನ ಪೂಜೆ, ವಿಸರ್ಜನಾ ಆರತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ3.00ರಿಂದ ಸಮಾರೋಪ ಸಮಾರಂಭವು ರವೀಶ್‌ ತಂತ್ರಿ ಕುಂಟಾರು, ಧಾರ್ಮಿಕ ನಾಯಕರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡಾ. ಶ್ರೀಕೃಷ್ಣ ಪ್ರಸನ್ನ, ಜಿಲ್ಲಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್‌ ಪುತ್ತೂರು ಜಿಲ್ಲೆ ಇವರು ವಹಿಸಲಿದ್ದಾರೆ. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸುದೇಶ್‌ ಭಂಡಾರಿ ಎರ್ಮೆನಿಲೆ, ಅಧ್ಯಕ್ಷರು ಲಯನ್ಸ್‌ ಕ್ಲಬ್‌ ವಿಟ್ಲ ಇವರು ಮಾಡಲಿದ್ದರೆ.

ಸಂಜೆ 5.00 ಗಂಟೆಗೆ ಕರ್ನಾಟಕ ಕಲಾಶ್ರೀ ಡಾ. ಪಿ.ಕೆ. ದಾಮೋದರ್‌ ಪುತ್ತೂರು ಮತ್ತು ಬಳಗದವರಿಂದ ವಾದ್ಯಗೋಷ್ಠಿ ನಡೆಯಲಿದೆ. ಸಂಜೆ 6.00 ಗಂಟೆಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಬಳಿಕ ಶ್ರೀ ಅನಂತೇಶ್ರವರ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ನಡೆಯಲಿದೆ.

- Advertisement -

Related news

error: Content is protected !!