Sunday, June 2, 2024
spot_imgspot_img
spot_imgspot_img

ವಿಟ್ಲ: ಕನ್ಯಾನ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಕೆ.ಪಿ ಅಬ್ದುಲ್ ರಹಿಮಾನ್ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಕನ್ಯಾನ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಪಿ ಅಬ್ದುಲ್ ರಹಿಮಾನ್ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಕುಸುಮಾ ಅವರು ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಒಟ್ಟು 20 ಸ್ಥಾನಗಳಲ್ಲಿ 14 ಕಾಂಗ್ರೆಸ್ ಬೆಂಬಲಿತರು, 6 ಬಿಜೆಪಿ ಬೆಂಬಲಿತರು ಜಯಗಳಿಸಿದ್ದರು. ಸಾಮಾನ್ಯ ಪುರುಷ ಅಧ್ಯಕ್ಷ, ಎಸ್ ಟಿ ಮಹಿಳೆ ಉಪಾಧ್ಯಕ್ಷೆ ಮೀಸಲಾತಿ ಘೋಷಣೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಲ್ಲಿ ಎಸ್ ಟಿ ಮಹಿಳೆ ಇಲ್ಲದ ಕಾರಣ ಬಿಜೆಪಿ ಪಾಲಾಗಿದೆ.

ಚುನಾವಣಾಧಿಕಾರಿ ಜ್ಙಾನೇಶ್ ಮತ್ತು ಅಭಿವೃದ್ಧಿ ಅಧಿಕಾರಿ ವಿಜಯಶಂಕರ್ ಆಳ್ವ ಮತ್ತು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಕೆ.ಪಿ ಅಬ್ದುಲ್ ರಹಿಮಾನ್ ಅವರು ಕಳೆದ ಬಾರಿ ಉಪಾಧ್ಯಕ್ಷರಾಗಿದ್ದರು. ಅವರು ಸತತ 6ನೇ ಬಾರಿಗೆ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಒಂದು ಅವಧಿಯ ಎರಡುವರೆ ವರ್ಷ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

- Advertisement -

Related news

error: Content is protected !!