Thursday, May 2, 2024
spot_imgspot_img
spot_imgspot_img

ವಿಟ್ಲ: ಕಲ್ಲೆಂಚಿಪಾದೆ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯ ನಿಮಿತ್ತ ಶಿಲಾ ಮೆರವಣಿಗೆ ಮತ್ತು ನಿಧಿ ಸಂಗ್ರಹಣೆ

- Advertisement -G L Acharya panikkar
- Advertisement -

ವಿಟ್ಲ: ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಶ್ರೀ ಪಿಲಿಚಾಮುಂಡಿ ದೈವದ ಸನ್ನಿಧಿ ಜೀರ್ಣೋದ್ಧಾರದ ಹಂತದಲ್ಲಿದೆ. ಈ ಹಿನ್ನಲೆ ಶ್ರೀ ಪಿಲಿಚಾಮುಂಡಿ ದೈವದ ಸೇವಾ ಸಮಿತಿ (ರಿ) ವತಿಯಿಂದ ಜೀರ್ಣೋದ್ಧಾರದ ಪ್ರಯುಕ್ತ ಶಿಲಾ ಮೆರವಣಿಗೆ ಮತ್ತು ನಿಧಿ ಸಂಗ್ರಹಣೆಯು ಜ.08ರಂದು ನಡೆಯಿತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಾದಂತಹ ಕೆತ್ತನೆಯ ಶಿಲೆಗಳ ಮೆರವಣಿಗೆಗೆ ವಿಟ್ಲ ಬಂಗಾರ್‌ ಅರಸರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಕಾರ್ಕಳದಿಂದ ಆಗಮಿಸಲಿರುವ ದಾರಂದ ಹಾಗೂ ಕಲ್ಲುಗಳನ್ನು ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದಿಂದ ವಾಹನ ಜಾಥಾ ಮೂಲಕ ಪ್ರಾರಂಭಗೊಂಡು ಉಕ್ಕುಡ, ದರ್ಬೆ, ಪಡಿಬಾಗಿಲು, ಸತ್ಯಸಾಯಿ ವಿಹಾರ, ಚೆಂಡುಕಳ, ಶಾರದಾ ವಿಹಾರ, ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನ , ಬೈರಿಕಟ್ಟೆ, ಆನೆಪದವು, ಕಾನತ್ತಡ್ಕದಿಂದ ಕಲ್ಲೆಂಚಿಪಾದೆ ದೈವ ಸನ್ನಿಧಿಗೆ ಆಗಮಿಸಿ ಸಮಾಪನಗೊಂಡಿತ್ತು.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಬಂಗಾರ್‌ ಅರಸರು, ಕೃಷ್ಣಯ್ಯ.ಕೆ , ಜಯರಾಮ್‌ ಬಲ್ಲಾಳ್‌, ದೈವಸ್ಥಾನದ ಆಡಳಿತ ಮೊಕ್ತೇಸರ ವೆಂಕಟೇಶ ಭಟ್, ಸಮಿತಿಯ ಅಧ್ಯಕ್ಷರು ಕಾನ ಈಶ್ವರ ಭಟ್, ಜೊತೆ ಕಾರ್ಯದರ್ಶಿ ಪ್ರವೀಣ್ ಸಣ್ಣಗುತ್ತು, ಉಪಾಧ್ಯಕ್ಷರು ರೂಪೇಶ್ ರೈ ಅಳಿಕೆ ಗುತ್ತು, ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೋಶಾಧಿಕಾರಿ ಹರೀಶ್ ಶೆಟ್ಟಿ, ರಂಜಿತ್ ಕಿನ್ನಿಮಜಲು, ಧನಂಜಯ ಕಾನ,ಲಿಂಗಪ್ಪಗೌಡ, ಶ್ರೀನಿವಾಸ್ ಗೌಡ, ಸುಂದರ ಗೌಡ,ಕೃಷ್ಣಪ್ಪ ಕಾಂತಡ್ಕ ಮತ್ತು ಸಮಿತಿಯ ಸರ್ವ ಸದಸ್ಯರು ಹಾಗೂ ಊರ ಸಮಸ್ತ ನಾಗರಿಕರು ಭಾಗವಹಿಸಿದ್ದರು.

- Advertisement -

Related news

error: Content is protected !!