Sunday, June 14, 2026
spot_imgspot_img
spot_imgspot_img

ವಿಟ್ಲ: ಕಳೆದು ಹೋದ ಪರ್ಸ್‌ಅನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿಟ್ಲ ಯುವಕರು

- Advertisement -
- Advertisement -

ಚಲನ ಚಿತ್ರ ವೀಕ್ಷಿಸಲು ತೆರಳಿದ್ದ ವೇಳೆ ವಿಟ್ಲದ ಯುವಕರಿಗೆ ಪುತ್ತೂರಿನ ಅರುಣಾ ಥಿಯೇಟರ್ ಬಳಿ ಅಗತ್ಯ ದಾಖಲೆ, ಚಿನ್ನದ ಉಂಗುರ, ನಗದು ಹೊಂದಿದ್ದ ಪರ್ಸ್‌ ಸಿಕ್ಕಿದೆ. ಪರ್ಸ್ ನೋಡಿದಾಗ ಅದರಲ್ಲಿದ ಪೆನ್‌ಡ್ರೈವ್‌ನಲ್ಲಿದ್ದ ದಾಖಲೆ ಪರಿಶೀಲಿಸಿದಾಗ ಮೊಬೈಲ್ ನಂಬರ್ ಸಿಕ್ಕಿದೆ. ಆ ನಂಬರ್ ಕರೆ ಮಾಡಿ ನಿಮ್ಮ ಕಳೆದು ಹೋದ ಪರ್ಸ್‌ ನಮ್ಮಲಿದೆ ಎಂದು ತಿಳಿಸಿ ನಂತರ ವಿಟ್ಲದ ವಿಟಿವಿ ಕಛೇರಿಯಲ್ಲಿ ಹಸ್ತಾಂತರ ಮಾಡಿದ್ದಾರೆ.

ಸಿಂಗರ್ ಪ್ರವೀಣ್ ಜಯ ವಿಟ್ಲ ಮತ್ತು ತೇಜಸ್‌‌ ಇವರು ಹಸ್ತಾಂತರ ಮಾಡಿದ್ದಾರೆ. ಮೋಹನ್ ಆಲಂಗಾರು ಎಂಬವರಿಗೆ ಸೇರಿದ ಪರ್ಸ್‌ ಇದಾಗಿದೆ. ಹಸ್ತಾಂತರ ಮಾಡುವ ವೇಳೆ ಶಿವಂ ಡ್ಯಾನ್ಸ್ ಅಕಾಡೆಮಿಯ ಸುಧೀರ್ ಜೊತೆಗಿದ್ದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

astr
- Advertisement -

Related news

error: Content is protected !!