
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳ 05ರಿಂದ 10ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಕೃಷ್ಣಪ್ಪ ಗೌಡ ಗುರ್ಮೆಯವರ ಅಧ್ಯಕ್ಷತೆಯಲ್ಲಿ ಗುರ್ಮೆ ತರವಾಡ್ ವಲಯ ಸಮಿತಿಯ ರಚನೆಯ ಸಭೆ ನಡೆಸಲಾಯಿತು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸುವಂತೆ ಈ ವಲಯದ ಜನರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರ ಪರಮಪೂಜ್ಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ವಿನಂತಿಸಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿದೆ ಎಂಬುದನ್ನು ನೀವು ಎಲ್ಲರೂ ನಮ್ಮೊಂದಿಗಿದ್ದು ನಡೆಸಿಕೊಡಬೇಕೆಂದು ವಿನಂತಿಸಿದರು. ಕುಕ್ಕಾಜೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶ್ರಮದಾನ ಮೂಲಕ ಈ ಹಿಂದೆಯೂ ಸಹಕರಿಸಿರುತ್ತೇವೆ. ಮಂದೆಯೂ ಸಹಕರಿಸುವುದಾಗಿ ವಲಯ ಸಮಿತಿಯವರು ಭರವಸೆ ನೀಡಿದರು, ಹರೀಶ್, ಜಯರಾಮ, ಗಂಗಾಧರ ಗೌಡ, ತಿಮ್ಮಪ್ಪ ಗೌಡ, ಹಾಗೂ ಕುಕ್ಕಾಜೆ ಕ್ಷೇತ್ರದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗುರ್ಮೆ ವಲಯ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಉಪಾಧ್ಯರಾಗಿ ಗಂಗಾಧರ ಗೌಡ, ಕಾರ್ಯದರ್ಶಿಯಾಗಿ, ಹರೀಶ್ ಜತೆ ಕಾರ್ಯದರ್ಶಿಯಾಗಿ ಜಯರಾಮ್, ಕಾರ್ಯಕಾರಿ ಸದಸ್ಯರಾಗಿ ತಿಮ್ಮಪ್ಪ ಗೌಡ, ವಾಸು ಗೌಡ, ಜೊಳಿಯಪ್ಪ ಗೌಡ, ಪೂವಪ್ಪ ಗೌಡ, ಜಗನ್ನಾಥ ಗೌಡ, ಸೇಸಪ್ಪ ಗೌಡ, ಆನಂದ ಗೌಡ, ಶ್ರೀಧರ ಗೌಡ, ಬಾಸ್ಕರ ಗೌಡ, ಶ್ರೀನಿವಾಸ ಗೌಡ, ಹಾಗೂ ಸುಮಾರು 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಹರೀಶ್ ಗುರ್ಮೆ ಸ್ವಾಗತಿಸಿ, ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು.
- ಸಾರ್ವಜನಿಕ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್: ಕಠಿಣ ಶಿಕ್ಷೆ ಮಸೂದೆ ಲೋಕಸಭೆಯಲ್ಲಿ ಮಂಡನೆ
- ಇಡ್ಕಿದು ಮನೆಯ ಅಂಗಳದಿಂದ ಕಳವಾಗಿದ್ದ ಬೈಕ್ ಬಿ.ಸಿ.ರೋಡ್ನಲ್ಲಿ ಪತ್ತೆ; ಆರೋಪಿಗಳ ಪತ್ತೆಗೆ ತನಿಖೆ ಚುರುಕು
- CJP ಪ್ರತಿಭಟನೆ ಬೆಂಬಲಿಸಿದರೆನ್ನಲಾದ ಬಿಜೆಪಿ ಸಂಸದೆಯ ಪುತ್ರಿಯ ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯ? -ವೈರಲ್ ಪೋಸ್ಟ್ಗೆ ಹೊಸ ತಿರುವು
- ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ಪೂರೈಕೆ: ಬೆಳ್ತಂಗಡಿಯ ಜಲೀಲ್ ಬಾಬಾ ವಿರುದ್ಧ ಸಿಸಿಬಿ ತನಿಖೆ ತೀವ್ರ
- ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಪ್ರಧಾನಿ ಮೋದಿ ಕರೆ










