Friday, September 11, 2026
spot_imgspot_img
spot_imgspot_img

ನಿದ್ರೆಯಲ್ಲಿದ್ದ ಪತ್ನಿ, ಮೂವರು ಮಕ್ಕಳ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ಪಾಪಿ ತಂದೆ!

- Advertisement -
- Advertisement -

ಜೈಪುರ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಜೈಪುರದ ಕರ್ಧನಿ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಗೀತಾ ಝಾ ಹಾಗೂ ಅವರ ಪುತ್ರಿಯರಾದ ನಂದಿನಿ, ರಾಧಿಕಾ ಮತ್ತು ಗೌರಿ ಎಂದು ಗುರುತಿಸಲಾಗಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದ ನಂತರ, ಗೋವಿಂದ್ ವಾಟಿಕಾದಲ್ಲಿರುವ ಅವರ ಮನೆಯಲ್ಲಿ ಮೃತದೇಹಗಳು ಪತ್ತೆಯಾದವು.

ಕೌಟುಂಬಿಕ ಕಲಹ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ಪೊಲೀಸರು ತಿಳಿದುಬಂದಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಮನೆಗೆ ತೆರಳಿ, ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ.

ಪತ್ನಿ ಮತ್ತು ಮಕ್ಕಳು ನಿದ್ರಿಸುತ್ತಿದ್ದಾಗ ಕಲ್ಲಿನಿಂದ ಅವರ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ. ಕೊಲೆ ನಂತರ ಸ್ಥಳದಲ್ಲಿ ಹರಡಿದ್ದ ರಕ್ತವನ್ನು ಬಟ್ಟೆಯಿಂದ ಒರೆಸಿ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!