Sunday, May 19, 2024
spot_imgspot_img
spot_imgspot_img

ವಿಟ್ಲ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಪರಿಹಾರ ಧನದ ಚೆಕ್ ವಿತರಣೆ

- Advertisement -G L Acharya panikkar
- Advertisement -
suvarna gold

ವಿಟ್ಲ: ಮಾರಕ ಕಾಯಿಲೆ ಕೋವೀಡ್-19 ನಿಂದ ಮೃತಪಟ್ಟಿರುವ ರೋಗಿಗಳ ಕುಟುಂಬಸ್ಥರಿಗೆ ಸರ್ಕಾರದ ರೂ 1,00,000ರೂಗಳ ಸಾಂತ್ವನ ಧನದ ಚೆಕ್ಕನ್ನು ಮಾನ್ಯ ಶಾಸಕರಾದ ಸಂಜೀವ ಮಠಂದೂರುರವರುರವರು ವಿಟ್ಲದ ಐಬಿ ಹಾಲ್’ನಲ್ಲಿ ವಿತರಿಸಿದರು.

ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ಕಾಯಿಲೆಯು ಹಲವಾರು ಜನರನ್ನು ಬಲಿ ತೆಗೆದುಕೊಂಡಿದೆ, ಕೆಲವೊಂದು ಮನೆಗಳಲ್ಲಿ ದುಡಿಯುವ ಮನೆಯ ಯಜಮಾನನ್ನೇ ಬಲಿ ತೆಗೆದುಕೊಂಡಿದೆ. ಈ ಕಾರಣದಿಂದ ಕರ್ನಾಟಕ ರಾಜ್ಯ ಸರಕಾರವು ಬಡತನ ರೇಖೆಗಿಂತ ಕೆಳಗಿರುವ ಜನರು ಮೃತಪಟ್ಟಿದ್ದಲ್ಲಿ 1 ಲಕ್ಷ ಮತ್ತು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರವು APL ಮತ್ತು BPL ನ ಅರ್ಹ ಕುಟುಂಬಕ್ಕೆ 50,000 ಸಾಂತ್ವನ ಧನವನ್ನು ವಿತರಿಸುತ್ತಿದೆ. ಈ ಮೊತ್ತವನ್ನು ಉಪಯೋಗಿಸಿಕೊಂಡು ಮತ್ತೆ ಬದುಕನ್ನು ಕಟ್ಟಿಕೊಳ್ಳಬೇಕೇಂದು ತಿಳಿಸಿದರು.

ಈ ವೇಳೆ ಭಾಜಪಾ ಗ್ರಾಮಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಅರುಣ್ ವಿಟ್ಲ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ವಿಟ್ಲ.ಪ.ಪಂ.ಚುನಾಯಿತ ಸದಸ್ಯರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

vtv vitla
vtv vitla
vtv vitla
- Advertisement -

Related news

error: Content is protected !!