


ವಿಟ್ಲ: ಸುಬ್ರಹ್ಮಣ್ಯ ಜ್ಞಾನದ ಅಧಿಪತಿ. ಹಿಂದೂ ಸಮಾಜದಲ್ಲಿ ಕಳೆದು ಹೋಗಿರುವುದು ಬಹಳಷ್ಟಿದೆ. ಅದನ್ನು ಸರಿಪಡಿಸುವ ಕೆಲಸವಾಗಬೇಕು. ಹಿಂದೂ ಸಮಾಜ ಸಮರ್ಥವಾಗಬೇಕು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀಮದ್ ವಿದ್ಯಾಮಾನ್ಯ ತೀರ್ಥ ಸಂಸ್ಥಾನಮ್ ನ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.೩ರಿಂದ ಜ.೮ರ ವರೆಗೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.೬ ರಂದು ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ನಾವು ಎಚ್ಚೆತ್ತುಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಜಾತಿ, ಜಾತಿ ಮಧ್ಯೆ ಇರುವ ಕಂದಕವನ್ನು ಮುಚ್ಚುವ ಕೆಲಸವಾಗಬೇಕು ಸಮಾಜಕ್ಕೆ ಸರ್ವತ್ರ ವ್ಯವಸ್ಥೆಯನ್ನು ಕೊಟ್ಟವರು ಗುರುಗಳು. ಅಮೃತತ್ವಕ್ಕಿಂತ ಮಿಗಿಲಾದುದು ತ್ಯಾಗ. ಭಕ್ತಿ ಭಾವ ವಿಶೇಷವಾದ ವ್ಯವಸ್ಥೆ. ನಮ್ಮಲ್ಲಿರು ತ್ಯಾಗ ನಮ್ಮನ್ನು ರಕ್ಷಿಸುತ್ತದೆ. ಹಿರಿಯರ ಕಟ್ಟುಪಾಡುಗಳನ್ನು ಉಳಿಸುವ ಪ್ರಯತ್ನವಾಗಬೇಕು ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ರಹ್ಮಕಲಶದ ವೇಳೆ ದೇವರಂತೆ ಜನರು ವೈಭವಪೂರಿತರಾಗಿರುತ್ತಾರೆ. ಭಗವಂತನ ಹೆಸರಿನಲ್ಲಿ ಊರಿಗೆ ಊರೇ ಸಂಭ್ರಮಿಸುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬ್ರಹ್ಮಕಲಶದ ವೇಳೆ ಗ್ರಾಮದ ಜನರ ಹೃದಯ ಶ್ರೀಮಂತಿಕೆ ಅರಿವಿಗೆ ಬರುತ್ತದೆ. ಸಾಮನ್ಯ ವ್ಯಕ್ತಿಯಿಂದ ದೇಶದಲ್ಲಿ ಭವ್ಯ ದೇಗುಲ ನಿರ್ಮಣವಾಗಿದೆ. ನಮ್ಮ ರಾಷ್ಟ್ರ ಜಗದ್ಗುರು ಭಾರತವಾಗಬೇಕು. ನಮ್ಮ ಅವಶ್ಯಕತೆಗಳು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಭಕ್ತಿ ಶ್ರದ್ಧೆ ನಮ್ಮಲ್ಲಿರಬೇಕು. ಹಿಂದೂ ಸಮಾಜದಲ್ಲಿ ನಂಬಿಕೆ ಶ್ರದ್ದೆ ಗಟ್ಟಿಯಾಗಬೇಕು. ನಮ್ಮಲ್ಲಿರುವ ಕೊರತೆಗಳನ್ನು ನೀಗಿಸುವ ಕೆಲಸ ಆಗಬೇಕಿದೆ. ನಮ್ಮ ಧರ್ಮ ನಮಗೆ ಶ್ರೇಷ್ಟ. ಹಿಂದುಗಳ ಭಾವನೆಗೆ ಸರಕಾರ ಬೆಲೆಕೊಡುವ ಕೆಲಸ ಮಾಡುತ್ತಿದೆ.

ಎಸ್.ಆರ್. ರಂಗಮೂರ್ತಿ ಪುಣಚರವರು ಮಾತನಾಡಿ ದಶಕಗಳ ಸಂಬಂಧ ಈ ಗ್ರಾಮದೊಂದಿಗೆ ನನಗಿದೆ. ಗ್ರಾಮವಿಕಾಸದ ಕಾರ್ಯ ಅತ್ಯಂತ ವ್ಯವಸ್ಥಿತಿಯಾಗಿ ನಡೆದ ಗ್ತಾಮದಲ್ಲಿ ಇಡ್ಕಿದು ಗ್ರಾಮ ಕೂಡ ಒಂದು. ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ಹಿಂದುತ್ವ ಗೋಚರಿಸುತ್ತಿದೆ. ಹಿಂದೂ ಸಮಾಜ ಈ ದೇಶದಲ್ಲಿ ಮಾತ್ರ ಭದ್ರವಾಗಿದೆ. ಹಿಂದುತ್ವಕ್ಕೆ ಸವಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಗತ್ತಿನಲ್ಲಿ ಹಿಂದುತ್ವ ಉಳಿಯಲು ದೇಶ ಉಳಿಯಬೇಕು. ಹಿಂದುತ್ವ ಉಳಿದರೆ ನಮ್ಮ ಧರ್ಮ ಉಳಿಯುತ್ತದೆ. ಧರ್ಮವನ್ನು ಉಳಿಸುವ ಆಕಾಂಕ್ಷೆ ನಮ್ಮಲ್ಲಿರಬೇಕು ಎಂದರು.
ಕೋಡಿಂಬಾಡಿ ರೈ ಎಸ್ಟೇಟ್ & ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಮಾತನಾಡಿ ಧಾರ್ಮಿಕ ಸಭಾ ಕಾರ್ಯಕ್ರಮದತ್ತ ಜನರು ಒಲವು ತೋರಬೇಕು. ಧಾರ್ಮಿಕ ಸಭೆಗಳಲ್ಲಿ ಉಪನ್ಯಾಸ ಕಾರ್ಯಕ್ರಮದ ಅಗತ್ಯತೆ ಬಹಳಷ್ಟಿದೆ. ಬ್ರಹ್ಮಕಲಶದ ಉದ್ದೇಶ ದೇವರ ಸಾನಿಧ್ಯವನ್ನು ಹೆಚ್ಚಿಸಲು. ಕ್ಷೇತ್ರದ ಅಬಿವೃದ್ಧಿ, ಬ್ರಹ್ಮಕಲಶದಲ್ಲಿ ಗ್ರಾಮದ ಜನರ ಸಹಕಾರ ಅವಿಸ್ಮರಣೀಯ. ತಂದೆ – ತಾಯಿಯನ್ನು ಪ್ರೀತಿಸುವ ಕೆಲಸವಾಗಬೇಕು. ಸಣ್ಣ ಪುಟ್ಟ ವಿಚಾರದ ಬಗೆಗಿನ ವೈಮನಸ್ಸನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಲು ಬ್ರಹ್ಮಕಲಶ ಪೂರಕ. ಹಿಂದುತ್ವ ಉಳಿದರೆ ದೇಶ ಉಳಿಯಲು ಸಾಧ್ಯ. ಹಿಂದುತ್ವದ ಬಗ್ಗೆ ಕೆಲಸ ಮಾಡುವ ಅನಿವಾರ್ಯತೆ ಬಹಳಷ್ಟಿದೆ.
ರಾ.ಸ್ವ. ಸೇ.ಸಂಘದ ಕಾರ್ಯವಾಹ ಡಾ.ಜಯಪ್ರಕಾಶ್ ರವರು ಧಾರ್ಮಿಕ ಉಪನ್ಯಾಸ ನೀಡಿ ದೇವರ ಬಗೆಗಿನ ಭಕ್ತಿ ನಮ್ಮಲ್ಲಿ ಹೆಚ್ಚಾಗಬೇಕು. ಚರಣಗಳು ನಮ್ಮನ್ನು ದೇವಸ್ಥಾನದವರೆಗೆ ಕೊಂಡೊಯ್ಯುತ್ತದೆ. ಆಚರಣೆಗಳು ದೇವರ ಬಳಿಗೆ ಕೊಂಡೊಯ್ಯುತ್ತದೆ. ಹಿಂದೂ ಧರ್ಮ ದೇವರು ಮನುಷ್ಯನನ್ನು ಹತ್ತಿರವಾಗಿಸಿದ ಧರ್ಮ. ಕೆಡುಕನ್ನು ಬಯಸದೆ ಎಲ್ಲರಿಗೂ ಒಳಿತನ್ನು ಬಯಸುವ ಮನಸ್ಸು ನಮ್ಮದಾಗಬೇಕು. ನಮ್ಮಷ್ಟು ಹಿಂಸೆಯನ್ನು ಅನುಭವಿಸಿದ ಧರ್ಮ ಇನ್ನೊಂದಿಲ್ಲ. ತ್ಯಾಗ, ಸೇವೆ ಸಮಾಜದ ಆಸ್ತಿ. ಶ್ರದ್ದಾಕೇಂದ್ರಗಳು ನಂಬಿಕೆಯನ್ನು ಹೆಚ್ಚುಮಾಡುತ್ತದೆ. ಆದ್ಯಾತ್ಮಿಕ ಭಕ್ತಿ ಎಲ್ಲರಲ್ಲೂ ಇದೆ. ಹಿಂದೂ ಸಮಾಜದಲ್ಲಿ ಒಂದು ಅಂತಸತ್ವವಿದೆ. ನಮ್ಮನ್ನು ನಾವು ರಾಷ್ಟ್ರೀಕರಣಗೊಳಿಸುವ ಕೆಲಸವಾಗಬೇಕು. ಭಜನೆ ವಿಭಜನೆಯನ್ನು ತಡೆಯುತ್ತದೆ. ದೇವಸ್ಥಾನದ ಶಕ್ತಿ ಇನ್ನಷ್ಟು ಹೆಚ್ಚಾಗಲಿ ಎಂದರು.
ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ ಇಷ್ಟೊಂದು ಸಣ್ಣ ಗ್ರಾಮದಲ್ಲಿ ಇಷ್ಟು ಸುಂದರ ಕ್ಷೇತ್ರ ನಿರ್ಮಾಣವಾಗಿರುವುದು ಸಂತಸದ ವಿಚಾರ. ಕ್ಷೇತ್ರಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕೆಲಸವಾಗಬೇಕು. ನಾವು ಕಲಿತಿರುವುದಕ್ಕಿಂತ ಹೆಚ್ಚು ಕಲಿಯಲು ಬಾಕಿಇದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ತಿಕ್ ತಂತ್ರಿ ಕೆಮ್ಮಿಂಜೆ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ. ನಾರಾಯಣ, ಲಕ್ಷ್ಮೀ ಅಮ್ಮ ಮುಕ್ಕುಡ, ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಈಶ್ವರ ಗೌಡ ನಾಯ್ತೋಟು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲಕ್ಷ್ಮೀ ಅಮ್ಮ ಮುಕ್ಕುಡರವರನ್ನು ಸನ್ಮಾನಿಸಲಾಯಿತು. ಕೊಂಕೋಡಿ ಪಡ್ಮನಾಭ, ವಿಠಲ ಙಟ್ ಬಡಾಜ, ನಾರ್ಣ ನಳಿಕೆ ಬೂತಡ್ಕ, ಮುತ್ತಪ್ಪ ನಲಿಕೆ, ಸಂಜೀವ ಮೂಲ್ಯ ಕೂವೆತ್ತಿಲ, ಚಂದ್ರಾವತಿ ಸೂರ್ಯ, ವಿಶ್ವನಾಥ ಗಾಣದಕೊಟ್ಯ, ಕಂಬಳಬೆಟ್ಟು ಶ್ರೀ ದುರ್ಗಾ ಶಾಮಿಯಾನದ ಮಾಲಕ ಹರೀಶ್ ಸಫಲ್ಯ, ಕುಂಡಡ್ಕ ಪ್ರಶಾಂತ್ ಸೌಂಡ್ಸ್ & ಲೈಟಿಂಗ್ಸ್ ನ ಮಾಲಕ ಪ್ರಶಾಂತ್ ಶೆಟ್ಟಿ ಬರೆ, ಪುಣಚ ಸೌಮ್ಯ ಲೈಟಿಂಗ್ಸ್ ನ ಮಾಲಕ ಲಿಂಗಪ್ಪ ಪುಣಚರವರನ್ನು ಗೌರವಿಸಲಾಯಿತು. ಚಂದ್ರಶೇಖರ ಕೊಪ್ಪಳ ಆಶಯಗೀತೆ ಹಾಡಿದರು. ಪ್ರಾರ್ಥಿಸಿದರು.
ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಈಶ್ವರ ಗೌಡ ಕೂವೆತ್ತಿಲ ವಂದಿಸಿದರು. ದಿನೇಶ್ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು.