Friday, March 29, 2024
spot_imgspot_img
spot_imgspot_img

ವಿಟ್ಲ: ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ

- Advertisement -G L Acharya panikkar
- Advertisement -
vtv vitla

ನಿಷ್ಕಲ್ಮಶ ಮನಸ್ಸಿನಿಂದ ದೇವರನ್ನು ಪೂಜಿಸಿದರೆ ಫಲ ಹೆಚ್ಚು – ಶ್ರೀ‌ ಧರ್ಮಪಾಲನಾಥ ಸ್ವಾಮೀಜಿ

ವಿಟ್ಲ: ಬಹಳ ಸಂಭ್ರಮ ಸಡಗರದ ಸಮಯವಿದು. ಶ್ರಮದಾನದ ಮುಖಾಂತರ ಭಕ್ತಿ ಶ್ರದ್ದೆಯ ಮೂಲಕ ಮಾಡಿದ ಕೆಲಸಕ್ಕೆ ಹೆಚ್ಚು ಮಹತ್ವವಿದೆ. ಮಾನವನ ಬದುಕು ಆತ್ಮೋದ್ದಾರದ ಕಡೆ ಮುಖ ಮಾಡಲು ಸಂಸ್ಕೃತಿ ಅಗತ್ಯ. ನಮ್ಮ ಜೀವನ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ನಿಲ್ಲಬೇಕು. ಬದುಕನ್ನು ಅರ್ಥೈಸಿ ನಡೆಯುವ ಮನಸ್ಸು ನಮ್ಮದಾಗಬೇಕು. ಆಚರಣೆ, ಸಂಪ್ರದಾಯವನ್ನು ನಾವು ಪಾಲನೆ‌ ಮಾಡಬೇಕು ಎಂದು ಅದಿಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ‌ ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.7ರಂದು ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಊರಿನ ದೇವಾಲಯ ಹೃದಯ ಸ್ಥಂಭ. ನಿಷ್ಕಲ್ಮಶ ಮನಸ್ಸಿನಿಂದ ದೇವರನ್ನು ಪೂಜಿಸಿದರೆ ಫಲ ಹೆಚ್ಚು. ಭಕ್ತಿಯ ಪರಾಕಾಷ್ಟೆಯನ್ನು ನಾವು ನಮ್ಮ ಮನಸ್ಸಿನಲ್ಲಿ ಕಂಡುಕೊಳ್ಳಬೇಕು. ನಮ್ಮಲ್ಲಿರುವ ಅಸುರ ಪ್ರವೃತ್ತಿಯನ್ನು ದೂರಮಾಡಬೇಕು. ನಮ್ಮನ್ನು ನಾವು ಉತ್ತಮ ಕಾರ್ಯಕ್ಕೆ ಬಳಸುವಂತಾಗಬೇಕು. ಜೀವನದಲ್ಲಿ ನಮ್ಮ ಬದುಕಿನ ಸದ್ಬಳಕೆಯಾಗಬೇಕು. ಸನಾತನ ಧರ್ಮ ನಂಬಿಕೆ , ಶ್ರದ್ದೆಯ ಮೇಲೆ ನಿಂತಿದೆ. ಆತ್ಮೋದ್ಧಾರದ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮ ಪೂರಕ. ಮನುಷ್ಯ ಜೀವನದಲ್ಲಿ ನೆಮ್ಮದಿ ಶಾಂತಿ ಮುಖ್ಯ. ದೇವರ ಸಾನಿಧ್ಯದಲ್ಲಿ ಭಕ್ತಿ ಶ್ರದ್ದೆಯಿಂದ ಪೂಜಿಸಿದಲ್ಲಿ ಬದುಕು ಪರಿಪೂರ್ಣವಾಗಲು ಸಾಧ್ಯ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕರವರು ಮಾತನಾಡಿ ಸಮಾಜವನ್ನು ಜಾಗೃತಿ ಮಾಡುವ ಕೆಲಸವಾಗಬೇಕಿದೆ. ದೇವಾಲಯ ಸಂಸ್ಕಾರದ ಕೇಂದ್ರವಾಗಿದೆ. ಹಿರಿಯರನ್ನು ಸ್ಮರಿಸುವ ಕೆಲಸವಾಗಬೇಕಿದೆ. ಪ್ರಕೃತಿ ಮತ್ತು ವಿಕೃತಿಯನ್ನು ನಾವು ತುಲನೆ ಮಾಡಬೇಕಿದೆ. ದುಷ್ಟ ಶಕ್ತಿಯನ್ನು ಮಟ್ಟಹಾಕಬೇಕಾಗಿದೆ. ನಮ್ಮ ಸಮಾಜವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕಿದೆ. ನಮ್ಮ ಕರ್ತವ್ಯವನ್ನು ನೆನಪಿಸುವ ಕೆಲಸವಾಗಬೇಕು. ಹಿಂದೂ ಸಮಾಜ ಸಮರ್ಥವಾಗಿ ಉತ್ತರಕೊಡುವ ಸಮಾಜವಾಗಬೇಕು. ನಮ್ಮ ಪದ್ದತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು. ಧಾರ್ಮಿಕತೆಯು ಹಚ್ಚಹಸಿರಾಗಿ ಉಳಿಯಲಿ‌ ಎಂದು ಶುಭಹಾರೈಸಿದರು.

ಧಾರ್ಮಿಕ ನೇತಾರ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ರಾಷ್ಟ್ರಧರ್ಮವನ್ನು ಪಾಲನೆ ಮಾಡಬೇಕಾದ ಕಾಲಘಟ್ಟವಿದು. ಧಾರ್ಮಿಕ‌ ಶ್ರದ್ದೆಯ ಜೊತೆಗೆ ಯುವಕರು ಕಾರ್ಯಕ್ರಮವನ್ನು ಕೇಸರಿಮಯವಾಗಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವ ಕ ಸಂಘದ ವಿಚಾರದಾರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು. ಧರ್ಮವಿರೋಧಿ ಚಟುವಟಿಕೆ ಸಮಾಜದ ಕಣ್ಣನ್ನು ತೆರೆಸಿದೆ. ಧಾರ್ಮಿಕ ವ್ಯವಸ್ಥೆಯಲ್ಲಿ ಜೀವನ‌ನಡೆಯಬೇಕು. ನಾವೆಲ್ಲರು ಸಂಘಟಿತರಾಗಬೇಕು. ಸನಾತನ ಧರ್ಮಸ ಕೆಲಸ ನಿರಂತರವಾಗಿ ನಡೆಯಲಿ. ಧರ್ಮಕಾರ್ಯದ ಜೊತೆಗೆ ರಾಷ್ಟ್ರ ಕಾರ್ಯ ಮಾಡೋಣ ಎಂದರು.

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ವೇ.ಮೂ.ತಿರುಮಲೇಶ್ವರ ಭಟ್ ‘ಅನೂಚಾನ’ ನಿಲಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮೊಳಗಿನ ವ್ಯತ್ಯಾಸವನ್ನು ದೇವರ ಸ್ಮರಣೆಯ ಮೂಲಕ ನಾವು ಸರಿಪಡಿಸಿಕೊಂಡು ಸಾಗಬೇಕು. ಕ್ಷೇತ್ರದಲ್ಲಿ ಹಲವಾರು ಕೆಲಸ ಕಾರ್ಯಗಳು ನಡೆದಿದೆ. ಉತ್ತಮವಾದ ವಾತಾವರಣ ನೀಡಲಿ. ಮಂಗಳಕರ ಮಾತುಗಳು ಕೇಳಿಬರಲಿ ಎಂದರು.

ಸುಳ್ಯ ನೆಹರೂಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯರವರು ಮಾತನಾಡಿ ಸದ್ಬುದ್ದಿ ನಿಷ್ಟೆ ಇದ್ದಾಗ ಭಗವಂತನೊಲಿಯಲು‌ ಸಾಧ್ಯ. ಬೌತಿಕವಾಗಿ ಮಾನಸೀಕವಾಗಿ, ಶಾರೀರಿಕವಾಗಿ ಕುಬ್ಜರಾಗಿ ಹೋಗುತ್ತಿದ್ದೇವೆ. ಹಿರಿಯರ ಕಟ್ಟುಪಾಡುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ನಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವ ಪ್ರಯತ್ನವಾಗಬೇಕಿದೆ. ಸ್ವಾಭಿಮಾನಿ ಸಮಾಜವನ್ನು ಕಟ್ಟುವ ಕೆಲಸವಾಗಬೇಕು. ಸಮಾಜದಲ್ಲಿ ಸಹಕಾರ ಸಹಭಾಗಿತ್ವ ಬೆಳೆಸಬೇಕು. ನಾವು ಸ್ವಯಂ ಜಾಗರೂಕರಾಗಬೇಕಿದೆ. ಎಲ್ಲರಲ್ಲೂ ಸತ್ ಚಿಂತನೆ ಬರಲಿ. ಹುಟ್ಟು ಸಾವಿನ ನಡುವಿನ ಜೀವನವನ್ನು ಸಭ್ಯರೀತಿಯಲ್ಲಿ ಮಾಡೋಣ. ನಾವು ಮಾಡುವ ಕೆಲಸಗಳು ಧರ್ಮಾಧಾರಿತವಾಗಿರಬೇಕು. ನಮ್ಮ ಅಂತರಂಗವನ್ನು ಸ್ವಚ್ಚಗೊಳಿಸುವ ಕೆಲಸವಾಗಬೇಕು. ಆಗ ಭಗವಂತನ ಸಾನಿಧ್ಯ ಅನುಭವಿಸಲು‌ ಸಾಧ್ಯ..

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ದಾಸ್ ನೇರ್ಲಾಜೆ, ಪುತ್ತೂರು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ, ವಿಟ್ಲ ಅರಮನೆಯ ಕೃಷ್ಣಯ್ಯ, ಕೆದಿಲ ಶ್ರೀ ಉಳ್ಳಾಕುಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜೆ. ಕೃಷ್ಣ ಭಟ್, ಕ್ಷೇತ್ರದ ವ್ಯವಸ್ಥಾಪನಾ ಸದಸ್ಯರಾದ ವಿ.ಕೆ.ಕುಟ್ಟಿ ಉರಿಮಜಲು, ವಿಜಯ ಕುಮಾರ್ ಗೌಡ ಸೂರ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೊರಗಪ್ಪ ಗೌಡ ಕೊಪ್ಪಳ, ಸುಂದರ ಗೌಡ ಕೊಪ್ಪಳ, ತಿಮ್ಮಪ್ಪ ಗೌಡ ಕೊಡಂಚರಪಾಲು, ಸೇಸಪ್ಪ ಗೌಡ ಸೂರ್ಯ, ಯಶೋಧ ನಾಯ್ತೋಟು, ಸೇಸಪ್ಪ ಗೌಡ ಸೂರ್ಯ, ಅಮ್ಮಣ್ಣಿ ಟೀಚರ್, ಕೃಷ್ಣಪ್ಪ ಗೌಡ ಸೂರ್ಯ, ಚೈತ್ರ ಕೂವೆತ್ತಿಲ, ಮಾಜಿ ಸೈನಿಕರಾದ ಶಿವಪ್ರಕಾಶ್ ಮಿತ್ತೂರು, ಪ್ರವೀಣ್ ಗೌಡ, ಕುಂಞಣ್ಣ ಗೌಡ ರವರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲಿಖಿತ್ ಸೂರ್ಯ, ದೀಕ್ಷಿತ್ ಕೊಡಂಚರಪಾಲು, ಮನ್ಮಿತ್ ಕೆ., ಪೂಜಾ, ಶುಷಾ ಮುಂಡ್ರಬೈಲು,

ಶ್ರುತಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್.ಮುಕ್ಕುಡರವರು ಸ್ವಾಗತಿಸಿದರು.
ಶ್ರೀಹರ್ಷ ವಂದಿಸಿದರು. ಜಯರಾಜ್ ಸನ್ಮಾನಿತರ ಪಟ್ಟಿವಾಚಿಸಿದರು. ಪುರುಷೋತ್ತಮ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!