Friday, March 29, 2024
spot_imgspot_img
spot_imgspot_img

ವಿಟ್ಲ: ಗುಡ್ಡ ಕುಸಿದು ಮನೆಗೆ ಹಾನಿ; ಅಪಾಯದಂಚಿನಲ್ಲಿ ಮನೆ

- Advertisement -G L Acharya panikkar
- Advertisement -

ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದಿದೆ. ವಿಟ್ಲದ ಪುಣಚ ಗ್ರಾಮದ ತೋರಣಕಟ್ಟೆ ಸುಣ್ಣಂಗಳ ಎಂಬಲ್ಲಿ ಗುಡ್ಡ ಕುಸಿದ ಘಟನೆ ನಡೆದಿದೆ.

ಸುಣ್ಣಂಗಳ ನಾರಾಯಣ ನಾಯ್ಕ ಎಂಬವರ ಮನೆಗೆ ನಿನ್ನೆಯಿಂದ ಗುಡ್ಡ ಮಣ್ಣು ಕುಸಿಯುತ್ತಿದ್ದು ಇಂದು ಮುಂಜಾನೆ ಹೆಚ್ಚು ಮಣ್ಣು ಕುಸಿದಿದೆ. ಗುಡ್ಡ ಕುಸಿದ ಪರಿಣಾಮ ಮನೆಯ ಶೀಟ್ ಮುರಿದು ಬಿದ್ದಿದ್ದು, ನಿರ್ಮಾಣ ಹಂತದಲ್ಲಿರುವ ಬಾತ್‌ರೂಮ್‌ ಸಂಪೂರ್ಣ ಹಾನಿಯಾಗಿದೆ. ಗುಡ್ಡೆಯ ಮಣ್ಣು ಕುಸಿದು ಮನೆಯೊಳಗೆ ಬಂದಿದೆ.

VA, ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದಾರೆ.

- Advertisement -

Related news

error: Content is protected !!