Sunday, June 14, 2026
spot_imgspot_img
spot_imgspot_img

ವಿಟ್ಲ: ಗೋ ಕಳವಾದ ಮಾಲಕರ ಮನೆಗೆ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಭೇಟಿ; ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹ

- Advertisement -
- Advertisement -

ವಿಟ್ಲ: ನೇರಳಕಟ್ಟೆ ಸಮೀಪದ ಏಮಾಜೆ ಎಂಬಲ್ಲಿ ಒಂದೇ ದಿನ 6 ಗೋವುಗಳನ್ನು ಕಳವು ಮಾಡಲಾಗಿದ್ದು, ಗೋಮಾಲಕರ ಮನೆಗೆ ಬಂಟ್ವಾಳದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದರು. ಗೋವುಗಳನ್ನು ಕಳವು ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ವಿಟ್ಲ ವೃತ್ತ ನಿರೀಕ್ಷಕ H.E ನಾಗರಾಜ್ ಅವರಿಗೆ ಸೂಚನೆ ನೀಡಿದರು.

ಬಂಟ್ವಾಳ ‌ವಿಧಾನಸಭಾ ಕ್ಷೇತ್ರದ ನೆಟ್ಲಮುಡ್ನೂರು ಗ್ರಾಮದ ಏಮಾಜೆ ಪರಿಸರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಐದಾರು ಮನೆಗಳಿಂದ ಒಂದೇ ದಿನ 6 ಗೋವುಗಳು ಕಳವಾಗಿರುವ ಬಗ್ಗೆ ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಾಮೋದರ ಏಮಾಜೆ, ಹೊನ್ನಮ್ಮ, ಪೂವಪ್ಪ ಅವರ ಮನೆಯ ಗೋವುಗಳನ್ನು ಒಂದೇ ದಿನ ಕಳವು ಮಾಡಲಾಗಿದೆ ಎಂದು ದೂರು ನೀಡಲಾಗಿದೆ.

ದನವನ್ನು ಸಾಕಿ ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುವ ಬಡ ಕುಟುಂಬಗಳ ಘಟನೆಯ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದಂತೆ ಹೆಚ್ಚಿನ ಕ್ರಮ ಕೈಗೋಳ್ಳಳಲು ಪೋಲೀಸ್ ಇಲಾಖೆಗೆ ಸೂಚಿಸಿದ್ದಾರೆ.. ಪ್ರಸ್ತುತ ಕಳವು ಮಾಡಿದ ಗೋ ಕಳ್ಳರನ್ನು ಶೀಘ್ರವಾಗಿ ಬಂಧಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ತನಿಯಪ್ಪ ಗೌಡ, ಆಶೋಕ್ ರೈ, ರಾಧಕೃಷ್ಣ ಅಡ್ಯಂತಾಯ, ಸುರೇಶ್ ಭಟ್ ಇಡ್ಕಿದು, ನರಸಿಂಹ ಶೆಟ್ಟಿ ಮಾಣಿ, ಜಗದೀಶ್ ದೇವಸ್ಯ , ನವೀನ್ ಕೋಲ್ಪೆ, ಚರಣ್. ಗುಣಾಕಾರ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!