Tuesday, June 9, 2026
spot_imgspot_img
spot_imgspot_img

ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ; ಕಾರು ಬೆಂಕಿಗಾಹುತಿ

- Advertisement -
- Advertisement -

ವಿಟ್ಲ: ಚಲಿಸುತ್ತಿದ್ದ ‌ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಗಮನಿಸಿದ ತಕ್ಷಣ ಚಾಲಕ ಮತ್ತು ಪ್ರಯಾಣಿಕರು ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದು, ವಿನಯ ಎಂಬವರ ಸರ್ವೀಸ್ ಸ್ಟೇಷನ್ ನಿಂದ ನೀರು ಹರಿಸಲಾಯಿತು. ಘಟನೆಯಲ್ಲಿ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

- Advertisement -

Related news

error: Content is protected !!