Tuesday, May 14, 2024
spot_imgspot_img
spot_imgspot_img

ವಿಟ್ಲ ಜಾತ್ರೋತ್ಸವ ಇಂದಿನಿಂದ ಆರಂಭ- ಸರ್ವಭಕ್ತರ ಸಮ್ಮುಖದಲ್ಲಿ ಧ್ವಜಾರೋಹಣ

- Advertisement -G L Acharya panikkar
- Advertisement -

ವಿಟ್ಲ: ಇತಿಹಾಸ ಪ್ರಸಿದ್ಧ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವ ದೇವಸ್ಥಾನದಲ್ಲಿ ಇಂದಿನಿಂದ ಜಾತ್ರೆ ಕಳೆಗಟ್ಟಲಿದೆ. ಇಂದು ಸರ್ವಭಕ್ತ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿತು.

ಮಕರ ಸಂಕ್ರಮಣದ ದಿನದಂದು ಧ್ವಜಾರೋಹಣ ನೆರವೇರುವುದು ಇಲ್ಲಿನ ವಾಡಿಕೆ. ಇಂದು ಮುಂಜಾನೆ ಧನುಪೂಜೆ ಅಂತ್ಯಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಆಗಮಿಸಿದ್ದರು. ಇಂದಿನಿಂದ ಎಂಟು ದಿನಗಳ ಕಾಲ ಕಾಲಾವಧಿ ಜಾತ್ರೆ ನಡೆಯಲಿದೆ.

ಇಂದು ಸಂಜೆ 5 ಗಂಟೆಗೆ ಜೈನ ಬಸದಿಯಿಂದ ವಿವಿಧ ಭಜನಾ ತಂಡಗಳೊಂದಿಗೆ ಉಲ್ಪೆ ಮೆರವಣಿಗೆ ಹಾಗೂ ಹಸಿರುವಾಣಿ ಮೆರವಣಿಗೆ ಜರುಗಲಿದೆ.

ಸಂಜೆ 6:30 ಕ್ಕೆ ಅರಸು ಮುಂಡಾಲ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮಿಸಿಲಿದೆ. ರಾತ್ರಿ 8:30 ಕ್ಕೆ ಉತ್ಸವ ಬಲಿ, ಕಟ್ಟೆ ಪೂಜೆಯ ಬಳಿಕ ಬಟ್ಟಲು ಕಾಣಿಕೆ ಜರುಗಲಿದೆ.

ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ವಿಟ್ಲ ಅರಮನೆಯ ಸದಾಶಿವ ಕೆ, ಕೃಷ್ಣಯ್ಯ ಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರು ಉಪಸ್ಥಿತರಿದ್ದರು.

- Advertisement -

Related news

error: Content is protected !!